ಐತಿಹಾಸಿಕ ಭೇಟಿ: ಹಸ್ತಲಾಘವದ ಮೂಲಕ ಕಿಮ್ ಜಾಂಗ್ ಉನ್, ಟ್ರಂಪ್ ಪರಸ್ಪರ ಸ್ವಾಗತ

ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾದ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ.
ಸಿಂಗಾಪುರದಲ್ಲಿ ಕಿಮ್ ಜಾಂಗ್ ಉನ್-ಡೊನಾಲ್ಡ್ ಟ್ರಂಪ್ ಭೇಟಿ
ಸಿಂಗಾಪುರದಲ್ಲಿ ಕಿಮ್ ಜಾಂಗ್ ಉನ್-ಡೊನಾಲ್ಡ್ ಟ್ರಂಪ್ ಭೇಟಿ
ಸಿಂಗಾಪುರ: ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮತ್ತು ಉ.ಕೊರಿಯಾದ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ.
ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿಯಾಗಿದ್ದು, ಹಸ್ತಲಾಘವದ ಮೂಲಕ ಪರಸ್ಪರ ಸ್ವಾಗತ ಕೋರಿದ್ದಾರೆ. ಈ ಐತಿಹಾಸಿಕ ದ್ವಿಪಕ್ಷೀಯ ಸಭೆಯಲ್ಲಿ ಭಾಷಾಂತರಕಾರರ ನೆರವಿನಿಂದ ಉಭಯ ನಾಯಕರು ಚರ್ಚೆ ನಡೆಸಿದರು. 
ಉತ್ತರ ಕೊರಿಯಾ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮೂಲಕ ವಿಶ್ವದ ದೊಡ್ಡಣ್ಣಗೆ ಸೆಡ್ಡು ಹೊಡೆದಿತ್ತು. ಆಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್​ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಸದ್ಯ ಎರಡು ರಾಷ್ಟ್ರಗಳ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಅಲ್ಲಿ ಚರ್ಚೆಯಾದ ವಿಷಯಗಳನ್ನ ಮಾಧ್ಯಮಗಳ ಮುಂದೆ ತಿಳಿಸುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com