ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಅಮೆರಿಕದ ಆಪ್ತ ರಾಷ್ಟ್ರಗಲ್ಲಿ ಒಂದಾಗಿರುವ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಗಳನ್ನು ನೀಡಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಭಾರತ-ಅಮೆರಿಕ ನಡುವಿನ ಸೇನಾ ಕಾರ್ಯತಂತ್ರ ಒಪ್ಪಂದದ ಅನ್ವಯ ಭಾರತಕ್ಕೆ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಸೇರಿದಂತೆ ಹಲವು ಯುದ್ಧ ಸಾಮಗ್ರಿಗಳನ್ನು ಪೊರೈಕೆ ಮಾಡಲು ಅಮೆರಿಕ ಸಿದ್ಧವಿದೆ. ಇನ್ನು ಕಳೆದ ವರ್ಷ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸದ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಈ ವೇಳೆ ಸಿ-17 ಗ್ಲೋಬ್ ಮಾಸ್ಟರ್ 3 ಕಾರ್ಯತಂತ್ರ ವಾಯುಶುದ್ಧೀಕರಣ ಸಾಧನಗಳು, ಎಂ-777 ಅತಿ ಲಘು ಹೊವಿಟ್ಜರ್ಗಳು, ಸಿ130ಜೆ ಸೂಪರ್ ಹರ್ಕ್ಯುಲಿಸ್ ವಿಮಾನ ಗಳು, ಅಪಾಚೆ ದಾಳಿ ಮತ್ತು 15 ಚಿನೂಕ್ ಏರ್ಲಿಫ್ಟ್ ಹೆಲಿಕಾಪ್ಟರ್ಗಳು, ಪಿ-8ಐ ನೌಕಾಪಡೆ ಗಸ್ತು ಯುದ್ಧ ವಿಮಾನಗಳಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು.