ಅಮೆರಿಕ: ಮೂವರು ಮಹಿಳೆಯರು, ಓರ್ವ ಬಂದೂಕುಧಾರಿ ಶವ ಪತ್ತೆ

ಯೋಂಟ್ ವಿಲೇಯ ಹಿರಿಯರ ಆಸರೆ ಗೃಹದಲ್ಲಿ ಮೂವರು ಮಹಿಳೆಯರು ಮತ್ತು ಅವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಬಂದೂಕುಧಾರಿಯ ಶವ ಪತ್ತೆಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕ್ಯಾಲಿಫೋರ್ನಿಯ(ಅಮೆರಿಕ): ಯೋಂಟ್ ವಿಲೇಯ ಹಿರಿಯರ ಆಸರೆ ಗೃಹದಲ್ಲಿ ಮೂವರು ಮಹಿಳೆಯರು ಮತ್ತು ಅವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಬಂದೂಕುಧಾರಿಯ ಶವ ಪತ್ತೆಯಾಗಿದೆ. 
ಈ ಪಾತ್ ವೇ ಹೋಮ್ ನ ಆಸರೆ ಗೃಹದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ವಿಕಲಾಂಗರಿದ್ದರು. ಈ ಪಾತ್ ವೇ ಹೋಮ್ ನ ಸದಸ್ಯನಾಗಿದ್ದ ಬಂದೂಕುಧಾರಿ ಮೂವರು ಮಹಿಳೆಯರನ್ನು ಒತ್ತೆ ಇರಿಸಿಕೊಂಡಿದ್ದ. ಪೊಲೀಸರು ಮತ್ತು ಒತ್ತೆಕೋರನ ನಡುವಿನ ಮುಖಾಮುಖಿಯು ದುರಂತದಲ್ಲಿ ಕೊನೆಗೊಂಡಿದೆ. 
ಬಂದೂಕುಧಾರಿ ಸುಮಾರು ಎಂಟು ಗಂಟೆಗಳ ಕಾಲ ಒತ್ತೆ ಇರಿಸಿಕೊಂಡಿದ್ದ ಒತ್ತೆಯಾಳುಗಳ ವಿಮೋಚನೆಗಾಗಿ ನಡೆದಿದ್ದ ಕಾರ್ಯಚರಣೆಯಲ್ಲಿ ಮೂವರು ಮಹಿಳೆಯರು ಮತ್ತು ಒತ್ತೆಕೋರ ಮೃತಪಟ್ಟಿದ್ದಾರೆ. 
ಮೃತ ಮೂವರು ಮಹಿಳೆಯರು ಆಸರೆ ಗೃಹದ ಸಿಬ್ಬಂದಿಗಳಾಗಿದ್ದಾರೆ ಎಂದು ಸ್ಟೇಟ್ ಸೆನೆಟರ್ ಬಿಲ್ ಡಾಡ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com