ರನ್ ವೇ ಮೇಲೆ ಟನ್‌ಗಟ್ಟಲೇ ವಜ್ರ, ಪ್ಲಾಟಿನಂ ಮತ್ತು ಚಿನ್ನದ ಬಿಸ್ಕಟ್ ಬಿದ್ದರೆ ಏನು ಗತಿ!

ರಷ್ಯಾದ ಯಾಕುಟ್ಸ್ಕ್ ನಗರದ ವಿಮಾನ ನಿಲ್ದಾಣದಲ್ಲ ವಿಮಾನವೊಂದು ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್‌ಗಟ್ಟಲೇ ಚಿನ್ನ ರನ್ ವೇಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಷ್ಯಾ: ರಷ್ಯಾದ ಯಾಕುಟ್ಸ್ಕ್ ನಗರದ ವಿಮಾನ ನಿಲ್ದಾಣದಲ್ಲ ವಿಮಾನವೊಂದು ಟೇಕಾಫ್ ಆಗುವ ವೇಳೆ ವಿಮಾನದ ಬಾಗಿಲು ತೆರೆದು ಟನ್‌ಗಟ್ಟಲೇ ಚಿನ್ನ ರನ್ ವೇಯಲ್ಲಿ ಚೆಲ್ಲಾ  ಪಿಲ್ಲಿಯಾಗಿ ಬಿದ್ದ ಘಟನೆ ನಡೆದಿದೆ. 
ವಿಮಾನದ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು ವಜ್ರ, ಪ್ಲಾಟಿನಂ ಹಾಗೂ ಚಿನ್ನವನ್ನು ಸಾಗಿಸುತ್ತಿದ್ದ ವಿಮಾನದ ಬಾಗಿಲು ತೆರೆದು ನೆಲದ ಮೇಲೆ ಕೋಟ್ಯಂತರ ಮೌಲ್ಯದ ಬೆಲೆಬಾಳುವ ಲೋಹಗಳು ಸುರಿದಿದೆ. 
ಸುಮಾರು 3 ಟನ್ ನಷ್ಟು ಚಿನ್ನ ರನ್ ವೇ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಈ ಸಂಬಂಧ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಎಎನ್ 12 ವಿಮಾನದಲ್ಲಿ 9ಕ್ಕೂ ಅಧಿಕ ಟನ್ ಚಿನ್ನ ಹಾಗೂ ಇತರ ಬೆಲೆ ಬಾಳುವ ಲೋಹವನ್ನು ಸಾಗಿಸಲಾಗುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com