ಫ್ರಾನ್ಸ್ ದಾಳಿಕೋರ ಉಗ್ರನ ಗೆಳತಿಯ ಬಂಧನ

ಫ್ರಾನ್ಸ್ ನ ಟೌಲೌಸ್ ನ ಸೂಪರ್ ಮಾರ್ಕೆಟ್ ನಲ್ಲಿ ದಾಳಿ ನಡೆಸಿ ನಾಲ್ಕು ಮಂದಿ ಸಾವಿಗೆ ಕಾರಣವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರನ ಗೆಳತಿಯನ್ನುಪ್ಯಾರಿಸ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯಾರಿಸ್: ಫ್ರಾನ್ಸ್ ನ ಟೌಲೌಸ್ ನ ಸೂಪರ್ ಮಾರ್ಕೆಟ್ ನಲ್ಲಿ ದಾಳಿ ನಡೆಸಿ ನಾಲ್ಕು ಮಂದಿ ಸಾವಿಗೆ ಕಾರಣವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರನ ಗೆಳತಿಯನ್ನುಪ್ಯಾರಿಸ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ ರಾಡೌನೆ ಲಕ್ಡಿಮ್ ಎಂಬ ಉಗ್ರ ಫ್ರಾನ್ಸ್ ನ ಟ್ರೆಬ್ಸ್ ನ ಸೂಪರ್ ಮಾರ್ಕೆಟ್ ವೊಂದಕ್ಕೆ ನುಗ್ಗಿ ಅಲ್ಲಿದ್ದ ಗ್ರಾಹಕರನ್ನು ಒತ್ತೆಯಾಳಾಗಿರಿಸಿಕೊಂಡು, ನಾಲ್ಕು ಮಂದಿಯನ್ನು ಕೊಂದು ಹಾಕಿದ್ದ. ದಾಳಿ ವೇಳೆ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಅಧಿಕಾರಿಗಳು ಉಗ್ರನನ್ನು ಕೊಂದು ಹಾಕಿದ್ದರು. ಇದಕ್ಕೂ ಮೊದಲು ಕಾರೊಂದನ್ನು ಹೈಜಾಕ್ ಮಾಡಿದ್ದ ಲಕ್ಡಿಮ್, ಮಾರ್ಗ ಮಧ್ಯೆ ಸಿಕ್ಕವೆರೆಲ್ಲರನ್ನೂ ಗುಂಡು ಹಾರಿಸಿ ಕೊಲ್ಲಲು ನಿಶ್ಚಯಿಸಿದ್ದ, ಈ ವೇಳೆ ಅದೇ ಮಾರ್ಗದಲ್ಲಿ ಜಾಗಿಂಗ್ ಮಾಡುತ್ತಿದ್ದ ಪೊಲೀಸ್ ಅಧಿಕಾರಿ ಮೇಲೆಯೂ ಗುಂಡು ಹಾರಿಸಿದ್ದ. ಘಟನೆಯಲ್ಲಿ 4 ಮಂದಿ ಸಾವನ್ನಪ್ಪಿ, 165 ಮಂದಿ ಗಾಯಗೊಂಡಿದ್ದರು.
ಬಳಿಕ ಸೂಪರ್ ಮಾರ್ಕೆಟ್ ನುಗ್ಗಿ ಅಲ್ಲಿದ್ದ ಗ್ರಾಹಕರನ್ನು ಒತ್ತೆಯಾಳಾಗಿರಿಸಿಕೊಂಡು ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದ. ಇದೀಗ ಉಗ್ರ ರಾಡೌನೆ ಲಕ್ಡಿಮ್ ನ ಗೆಳತಿಯನ್ನು ಫ್ರಾನ್ಸ್ ಪೊಲೀಸರು ಬಂಧಿಸಿದ್ದು, ರಹಸ್ಯ ಸ್ಥಳದಲ್ಲಿ ಆಕೆಯ ವಿಚಾರಣೆ ನಡೆಸಿದ್ದಾರೆ. 
ಇನ್ನು ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತಿದ್ದು, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com