
ಕರಾಚಿ: ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ಜೈಲಿನಲ್ಲಿರುವ 20 ವರ್ಷದ ಭಾರತದ ಕೈದಿ ಜಿತೇಂದ್ರ ಅರ್ಜುನ್ ವಾರ್ ನನ್ನು ವಾಪಸ್ ಕಳುಹಿಸಿದೆ.
ಥಲಸ್ಸೆಮಿಯಾ ಎಂಬ ರೋಗದಿಂದ ಬಳಲುತ್ತಿರುವ ಅರ್ಜುವ್ ವಾರ್ 2013ರ ಕೊನೆ ಭಾಗದಲ್ಲಿ ಆಕಸ್ಮಿಕವಾಗಿ ತನ್ನ ಕುಟುಂಬಸ್ಥರ ಜೊತೆ ಜಗಳ ಮಾಡಿಕೊಂಡು ಪಾಕಿಸ್ತಾನದ ಗಡಿ ದಾಟಿ ಹೋಗಿದ್ದನು. ಇದರಿಂದಾಗಿ ಪಾಕ್ ಗಡಿನಿಯಂತ್ರಣ ರೇಖೆ ಬಳಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ನಿನ್ನೆ ಕರಾಚಿಯ ಬಾಲಾಪರಾಧ ಗೃಹದಿಂದ ಅರ್ಜುನ್ ವಾರ್ ನನ್ನು ಬಿಡುಗಡೆ ಮಾಡಲಾಯಿತು. ಅಲ್ಲಿಂದ ಲಾಹೊರ್ ಗೆ ಬಂದು ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
2014ರಲ್ಲಿ ಜಿತೇಂದ್ರ ಅರ್ಜುನ್ ವಾರ್ ನನ್ನು ಬಂಧಿಸಲಾಗಿತ್ತು. ಭಾರತ ಈತನ ನಾಗರಿಕತ್ವವನ್ನು ಕಳೆದ ವರ್ಷವಷ್ಟೆ ದೃಢಪಡಿಸಿತ್ತು.
ಮಾನವ ಹಕ್ಕುಗಳ ಹೋರಾಟಗಾರ ಮತ್ತು ಸಂಗೀತಗಾರ ಶೆಹ್ಜಾದ್ ರಾಯ್ ನ ಪ್ರಯತ್ನದಿಂದಾಗಿ ಈ ಬಾಲಕನ ಬಿಡುಗಡೆ ಸಾಧ್ಯವಾಯಿತು.
ಮಾನವೀಯ ನೆಲೆಯಲ್ಲಿ ಕಳೆದ ಜನವರಿಯಿಂದ ಇದುವರೆಗೆ ಪಾಕಿಸ್ತಾನ 147 ಭಾರತೀಯ ಮೀನುಗಾರರನ್ನು ರಕ್ಷಿಸಿದೆ. ಇವರು ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಿದ್ದಾರೆ.
Advertisement