ಇರಾನ್ ಪರಮಾಣು ಒಪ್ಪಂದವನ್ನು ಹಿಂಪಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದಾರೆ. 
ಪರಮಾಣು ಒಪ್ಪಂದವನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಇರಾನ್ ಮೇಲೆ ನಿರ್ಭಂಧಗಳನ್ನೂ ವಿಧಿಸಿದ್ದಾರೆ. ಈ ಹಿಂದಿನ ಪರಮಾಣು ಒಪ್ಪಂದ ಇರಾನ್ ನ ಅಣ್ವಸ್ತ್ರಗಳ ದಾಹವನ್ನು ಕಡಿಮೆ ಮಾಡಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇರಾನ್ ಡೀಲ್ ಸಂಪೂರ್ಣವಾಗಿ ದೋಷಯುಕ್ತವಾಗಿತ್ತು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದು, ನ್ಯೂಕ್ಲಿಯರ್ ಡೀಲ್ ನ್ನು ರದ್ದುಗೊಳಿಸುತ್ತಿದ್ದೇನೆಂದು ಘೋಷಿಸಿದ್ದಾರೆ. ಇದೇ ವೇಳೆ ಇರಾನ್ ನ ಅಣ್ವಸ್ತ್ರಗಳ ದಾಹಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿರುವಂತಹ ನ್ಯೂಕ್ಲಿಯರ್ ಡೀಲ್ ನ್ನು ಪರಿಗಣಿಸುವುದಕ್ಕೆ ಸಿದ್ಧವಿರುವುದಾಗಿ ಟ್ರಂಪ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com