ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಭೀಕರ ದುರಂತ: ಕಾಳ್ಗಿಚ್ಚಿಗೆ 23 ಮಂದಿ ದಹನ

ಯಾ: ಅಮೆರಿಕಾ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ.
ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು
ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು
ಕ್ಯಾಲಿಫೋರ್ನಿಯಾ: ಅಮೆರಿಕಾ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ. 
ಶನಿವಾರದವರೆಗೆ ವಿನಾಶಕಾರಿ ಕಾಳ್ಗಿಚ್ಚಿಗೆ ಸಿಕ್ಕಿದ 14 ಜನರ ದೇಹಗಳನ್ನು ಪತ್ತೆಹಚ್ಚಲಾಗಿದೆ. ಇಂದು (ಭಾನುವಾರ) ಮತ್ತೆ ಒಂಬತ್ತು ದೇಹಗಳು ಸಿಕ್ಕಿದ್ದು ಒಟ್ಟಾರೆ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್ ನಲ್ಲಿ ಕಳೆದೆರಡು ದಿನಗಳಿಂದ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಬಲವಾಗಿ ಬೀಸುವ ಗಾಳಿಯ ಕಾರಣ ಬೆಂಕಿಯ ಕೆನ್ನಾಲಿಗೆಗಳು ಅತಿ ವೇಗವಾಗಿ ಪಸರಿಸಿದೆ. ಇದರಿಂದ ಅಪಾರ ಪ್ರಮಾಣದ ಕಾಡುಮೇಡು ಸೇರಿ ಜೀವಹಾನಿ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com