ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಆಫ್ಘಾನಿಸ್ತಾನದಲ್ಲಿ ಅಮೆರಿಕ ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದರ್ಶಿಯಾಗಿರುವ ಡೇವಿಡ್ ಸಿಡ್ನಿ ಅವರು, ಒಬಾಮ ಅವರ ಸರ್ಕಾರದ ಅವಧಿಯಲ್ಲೇ ಪಾಕಿಸ್ತಾನ ಮತ್ತು ಕೇಂದ್ರೀಯ ಏಷ್ಯಾದಲ್ಲಿನ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಪಾಕ್ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಆದರೆ ಈ ವರೆಗೂ ಪಾಕ್ ಸರ್ಕಾರ ಈ ಬಗ್ಗೆ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಅಂದು ಪಾಕ್ ಸರ್ಕಾರ ತಮಗೆ ಮಾತು ನೀಡಿತ್ತಾದರೂ, ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಭದ್ರತಾ ನೆರವನ್ನು ಕಡಿತಗೊಳಿಸಲಾಗಿದ ಎಂದು ಹೇಳಿದ್ದಾರೆ.