ಕಾಂಗರೂ ನಾಡಲ್ಲಿ ಶಾಂತಿದೂತನ ಕಲರವ: ಗಾಂಧಿ ಪ್ರತಿಮೆ ಅನಾವಣಗೊಳಿಸಿದ ರಾಷ್ಟ್ರಪತಿ ಕೋವಿಂದ್

3 ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಿಡ್ನಿಯಲ್ಲಿ ಗುರುವಾರ ಶಾಂತಿದೂತ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು...
ಕಾಂಗರೂ ನಾಡಲ್ಲಿ ಶಾಂತಿದೂತನ ಕಲರವ: ಗಾಂಧಿ ಪ್ರತಿಮೆ ಅನಾವಣಗೊಳಿಸಿದ ರಾಷ್ಟ್ರಪತಿ ಕೋವಿಂದ್
ಕಾಂಗರೂ ನಾಡಲ್ಲಿ ಶಾಂತಿದೂತನ ಕಲರವ: ಗಾಂಧಿ ಪ್ರತಿಮೆ ಅನಾವಣಗೊಳಿಸಿದ ರಾಷ್ಟ್ರಪತಿ ಕೋವಿಂದ್
ಆಸ್ಟ್ರೇಲಿಯಾ: 3 ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಿಡ್ನಿಯಲ್ಲಿ ಗುರುವಾರ ಶಾಂತಿದೂತ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. 
ಮಹಾತ್ಮ ಗಾಂಧೀಜಿಯವರ 150ನೇ ಜನ್ಮವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಡೀ ವಿಶ್ವವೇ ಗುರ್ತಿಸುವಂತಹ ವ್ಯಕ್ತಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ರಾಷ್ಟ್ರಪತಿ ಕೋವಿಂದ್ ಅವರು ಹೇಳಿದ್ದಾರೆ. 
ಪ್ರತಿಮೆ ಅನಾವರಣದ ವೇಳೆ ಸ್ಥಳದಲ್ಲಿದ್ದ ಭಾರತೀಯ ಸಮುದಾಯದ ಸದಸ್ಯರು ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. 
ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮೊರಿನ್ಸನ್ ಹಾಗೂ ಪಾರಮಟ್ಟ ಮೇಯರ್ ಆ್ಯಂಡ್ರೀವ್ ವಿಲ್ಸನ್ ಭಾಗವಿಸಿದ್ದರು. 
ಗಾಂಧಿ ಪ್ರತಿಮೆಯನ್ನು ಭಾರತೀಯ ಮೂಲದ ಶಿಲ್ಪಿಗಳಾದ ರಾಮ್ ಮತ್ತು ಅನಿಲ್ ಎಂಬುವವರು ನಿರ್ಮಿಸಿದ್ದಾರೆ. 
ಪ್ರತಿಮೆ ಅನಾವರಣದ ಬಳಿಕ ಕೋವಿಂದ್ ಅವರಿಗೆ ಹಿಂದ್ ಸ್ವರಾಜ್ ಎಂಬ ಪುಸ್ತಕವನ್ನು ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳು ಉಡುಗೊರೆಯಾಗಿ ನೀಡಿದರು. 
1909ರಲ್ಲಿ ಗಾಂಧೀಜಿಯವರು ರಚಿಸಿದ ಈ ಕೃತಿಯಲ್ಲಿ ಸ್ವಾತಂತ್ರ್ಯದ ರಾಷ್ಟ್ರೀಯ ಪರಿಕಲ್ಪನೆಗಳು, ನಾಗರೀಕತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com