ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್'ಗೆ ಭಾರತಿಂದ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಸಾಹಿಬ್ ಕಾರಿಡಾರ್'ಗೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ...
ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಕರ್ತಾರ್ಪುರ: ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್'ಗೆ ಭಾರತಿಂದ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಸಾಹಿಬ್ ಕಾರಿಡಾರ್'ಗೆ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 
ಗುರುದಾಸ್ ಪುರದಲ್ಲಿರುವ ಡೇರೇ ಬಾಬಾ ನಾನಕ್'ಗೆ ಸಂಪರ್ಕಿಸುವ 4 ಕಿ.ಮೀ ಉದ್ದದ ಮಾರ್ಗಕ್ಕೆ ಇಮ್ರಾನ್ ಖಾನ್ ಅವರು ಶಂಕು ಸ್ಥಾಪನೆ ಮಾಡಿದ್ದಾರೆ. 
ಭಾರತೀಯ ಸಿಖ್ ಯಾತ್ರಿಕರಿಗೆ ವೀಸಾ ಇಲ್ಲದೇ ಗುರುದ್ವಾರಕ್ಕೆ ಈ ಮಾರ್ಗ ಸಂಪರ್ಕಿಸಲಿದೆ. ಲಾಹೋರ್'ಗೆ ನಿನ್ನೆಯೇ ತೆರಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 
ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು, ಬರ್ಲಿನ್ ಗೋಡೆ ಧರೆಗುರುಳಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ವೈರತ್ವ ಕೂಡ ಕರ್ತಾರ್ಪುರ ಕಾರಿಡಾರ್ ಮೂಲಕ ದೂರಾಗಬಹುದು. ಬಾಬಾ ನಾನಕ್ ಅವರ ಹೆಸರಿನಲ್ಲಿ ಇದೊಂದು ಹೊಸ ಆರಂಭ. ಇಲ್ಲಿ ಯಾರೂ ಹಿಂದೂ, ಮುಸ್ಲಿಮರಿಲ್ಲ, ಎಲ್ಲರೂ ಒಂದೇ ಎಂದು ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಇಮ್ರಾನ್ ಖಾನ್ ಅವರನ್ನು ಕೊಂಡಾಡಿದ್ದಾರೆ. 

ನಾವು ಮುಂದಕ್ಕೆ ಸಾಗಬೇಕೆಂದು ಎರಡೂ ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕಿದೆ. ಪಂಜಾಬ್'ನ ಸಂದೇಶ ಲಾಹೋರ್ ವರೆಗೂ ತಲುಪಬೇಕೆಂದು ನನ್ನ ತಂದೆ ನನಗೆ ಹೇಳುತ್ತಿದ್ದರು. ಪೇಶಾವರ ಹಾಗೂ ಅಫ್ಗಾನಿಸ್ತಾನದ ವರೆಗೂ ಹೋಗಬೇಕೆಂದು ನಾನು ಬಯಸಿದ್ದೇನೆಂದು ಸಿಧು ಹೇಳಿದ್ದಾರೆ. 
3 ತಿಂಗಳ ಹಿಂದಷ್ಟೇ ಪಾಕಿಸ್ತಾನ ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದ ನವಜೋತ್ ಸಿಂಗ್ ಸಿಧು ಅವರು ಇಮ್ರಾನ್ ಖಾನ್ ಬಳಿ, ಕರ್ತಾರ್ಪುರ ಮಾರ್ಗ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಇಮ್ರಾನ್ ಸ್ಪಂದನೆ ನೀಡಿದ್ದರು. 
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಅವರ ಸಮಾಧಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ಜಿಲ್ಲೆಯಲ್ಲಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ನಿಂತರೆ ಸಮಾಧಿ ಇರುವ ಕರ್ತಾರ್ಪುರ ಗುರುದ್ವಾರ ಕಾಣುತ್ತದೆ. ಆದರೆ, ಅಲ್ಲಿಗೆ ಹೋಗಲು ಸಿಕ್ಖರು ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಬೇಕಿತ್ತು. 
ಅಂತರಾಷ್ಟ್ರೀಯ ಗಡಿಯಲ್ಲಿರುವ ಗುರುದಾಸ್ಪುರ ಜಿಲ್ಲೆಯಲ್ಲಿ ಕಾರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ನ.22ರಂದು ನಿರ್ಧಾರ ತೆಗೆದುಕೊಂಡಿತ್ತು. 
ಪಂಜಾಬ್'ನ ಗುರುದಾಸ್ಪುರದಲ್ಲಿರುವ ಡೇರಾ ಬಾಬಾ ನಾನಕ್'ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ನಾವು ಕಾರಿಡಾರ್ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್ಪುರವರೆಗೆ ನೀವೂ ಕಾರಿಡಾರ್ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಇದಾದ ಬಳಿಕ ಸಿಖ್ ಭಕ್ತರಿಗೆ ಗುರು ನಾನಕ್'ರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com