5 ವರ್ಷದ ಮಗುವಿನ 'ಎಬಿಸಿಡಿಇ' ಹೆಸರನ್ನು ಗೇಲಿ ಮಾಡಿ ನಕ್ಕು ಕ್ಷಮೆಯಾಚಿಸಿದ ವಿಮಾನಯಾನ ಸಂಸ್ಥೆ!

ಐದು ವರ್ಷದ ಮಗುವಿನ ಹೆಸರನ್ನು ಎಬಿಸಿಡಿಇ ಎಂದು ಕರೆದು ಗೇಲಿ ಮಾಡಿದ್ದ ವಿಮಾನಯಾನ ಸಂಸ್ಥೆಯೊಂದು ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಕೊನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕ್ಯಾಲಿಫೋರ್ನಿಯಾ: ಐದು ವರ್ಷದ ಮಗುವಿನ ಹೆಸರನ್ನು ಎಬಿಸಿಡಿಇ ಎಂದು ಕರೆದು ಗೇಲಿ ಮಾಡಿದ್ದ ವಿಮಾನಯಾನ ಸಂಸ್ಥೆಯೊಂದು ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಕೊನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. 
ಕ್ಯಾಲಿಫೋರ್ನಿಯಾದ ಸಂತಾ ಅನಾ ವಿಮಾನ ನಿಲ್ದಾಣದಿಂದ ಟೆಕ್ಸಾಸ್ ನ ಎಲ್ ಪಾಸೊಗೆ ತಾಯಿ ಹಾಗೂ ತನ್ನ 5 ವರ್ಷದ ಹೆಣ್ಣು ಮಗುವಿನ ಜತೆ ಪ್ರಯಾಣಿಸಲು ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಗೇಟ್ ಎಜೆಂಟ್ ಮಗುವಿನ ಹೆಸರನ್ನು ಕೇಳಿ ನಕ್ಕಿದ್ದಾನೆ. ಇದರಿಂದ ಮಗುವಿನ ತಾಯಿ ಬೇಸರಗೊಂಡರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 
ಇದರಿಂದ ಎಚ್ಚೇತ್ತ ಸೌಥ್ ವೆಸ್ಟ್ ವಿಮಾನಯಾನ ಸಂಸ್ಥೆಯ ವಕ್ತಾರ ಕ್ರಿಸ್ ಮೈನ್ಜಾ ಅವರು ಮಗುವಿನ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸಿದ್ದಾರೆ. ಕರ್ತವ್ಯದ ವೇಳೆ ಸಿಬ್ಬಂದಿ ಈ ರೀತಿ ವರ್ತಿಸಬಾರದಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com