ಭಾರತ-ರಷ್ಯಾ ಎಸ್-400 ಕ್ಷಿಪಣಿ ಒಪ್ಪಂದ: ವಹಿವಾಟು ನಿಲ್ಲಿಸಿ ಇಲ್ಲವೇ ನಿರ್ಬಂಧ ಎದುರಿಸಿ- ಅಮೆರಿಕಾ ಎಚ್ಚರಿಕೆ

ರಷ್ಯಾದಿಂದ ರೂ.36 ಸಾವಿರ ಕೋಟಿ ವೆಚ್ಚದಲ್ಲಿ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತದ ಮುಂದಾಗಿರುವ ಹಿನ್ನಲೆಯಲ್ಲಿ ವಹಿವಾಟು ನಿಲ್ಲಿಸಿ, ಇಲ್ಲವೇ ನಿರ್ಬಂಧ ಎದುರಿಸಿ ಎಂದು...
ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ
ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ
ವಾಷಿಂಗ್ಟನ್: ರಷ್ಯಾದಿಂದ ರೂ.36 ಸಾವಿರ ಕೋಟಿ ವೆಚ್ಚದಲ್ಲಿ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತದ ಮುಂದಾಗಿರುವ ಹಿನ್ನಲೆಯಲ್ಲಿ ವಹಿವಾಟು ನಿಲ್ಲಿಸಿ, ಇಲ್ಲವೇ ನಿರ್ಬಂಧ ಎದುರಿಸಿ ಎಂದು ಭಾರತಕ್ಕೆ ಗುರುವಾರ ಎಚ್ಚರಿಕೆ ನೀಡಿದೆ. 
ಅ.5 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಮೆರಿಕಾದ ದಿಗ್ಭಂಧನ ಬೆದರಿಕೆ ನಡುವೆಯೂ ಪುಟಿನ್ ಭೇಟಿ ವೇಳೆ ಎಸ್-400 ಟ್ರಯಂಫ್ ಖರೀದಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. 
ಪುಟಿನ್ ಭೇಟಿ ಬೆನ್ನಲ್ಲೇ ಭಾರತ-ರಷ್ಯಾ ಮೆಗಾ ಡೀಲ್'ಗೆ ಸಹಿ ಹಾಕಲಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ, ರಷ್ಯಾದೊಂದಿಗೆ ಮಾಡಿಕೊಳ್ಳುತ್ತಿರುವ ವ್ಯವಹಾರ ಹಾಗೂ ಒಪ್ಪಂದಗಳನ್ನು ಕೈಬಿಡುವಂತೆ  ನಮ್ಮ ಎಲ್ಲಾ ಮಿತ್ರ ರಾಷ್ಟ್ರಗಳು ಹಾಗೂ ಪಾಲುದಾರ ರಾಷ್ಟ್ರಗಳಿಗೆ ಒತ್ತಾಯಿಸುತ್ತೇವೆ. ಈ ಒಪ್ಪಂದಗಳು ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ನಿರ್ಬಂಧ (ಸಿಎಎಟಿಎಸ್ಎ) ಅಡಿಯಲ್ಲಿ ನಿರ್ಬಂಧಗಳನ್ನು ಪ್ರಚೋದಿಸುತ್ತವೆ ಎಂದು ಹೇಳಿದ್ದಾರೆ. 
ಎಸ್-400 ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆ ಒಳಗೊಂಡಂತೆ ಸಿಎಎಟಿಎಸ್ ಕಾಯ್ಗೆ ವಿಭಾಗ 231ರ ಅಡಿಯಲ್ಲಿ ಬರುವ ಎಲ್ಲವುದರ ಕುರಿತಂತೆ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 
ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಖರೀದಿಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕಾ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕಾದಿಂದ ವಿಶೇಷ ವಿನಾಯಿತಿ ಪಡೆಯುವುದಾಗಿ ಭಾರತ ಹೇಳಿಕೊಂಡಿತ್ತು. ಆದರೆ, ಇದಕ್ಕೆ ಯಾವುದೇ ಖಾತ್ರಿ ಇಲ್ಲ ಎಂದು ಅಮೆರಿಕಾದ ಅಧಿಕಾರಿಘಳು ತಿಳಿಸಿದ್ದಾರೆ. 
ಪುಟಿನ್ ಭೇಟಿ ವೇಳೆ ಎಸ್-400 ಟ್ರಯಂಫ್ ಅಷ್ಟೇ ಅಲ್ಲದೆ, ಬೆಂಗಳೂರಿನ ಹೆಚ್ಎಎಲ್'ನಲ್ಲಿ ರಷ್ಯಾದ ಕಮೋವ್ ಎಂಬ 200 ಹೆಲಿಕಾಪ್ಟರ್ ಗಳನ್ನು ಉತ್ಪಾದನೆ ಮಾಡುವ ಸಂಬಂಧ ಉಭಯ ರಾಷ್ಟ್ರಗಳ ನಡುವೆ ರೂ.7300 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com