ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಅಮೆರಿಕ ಪರಮಾಣು ಇಂಧನ ವಿಭಾಗದ ಮುಖ್ಯಸ್ಥೆಯಾಗಿ ಭಾರತೀಯ ಮೂಲದ ರೀಟಾ ಬರನ್ವಾಲ್ ನೇಮಕಕ್ಕೆ ಟ್ರಂಪ್ ಆಸಕ್ತಿ

ಭಾರತೀಯ ಮೂಲದ ಅಮೆರಿಕಾದ ಪರಮಾಣು ತಜ್ಞೆಯನ್ನು ಅಮೆರಿಕಾದ ಪರಮಾಣು ಇಂಧನ ವಿಭಾಗದ ಪ್ರಮುಖ ಆಡಳಿತಾಧಿಕಾರಿಯ ಸ್ಥಾನಕ್ಕೆ ನೇಮಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿದ್ದಾರೆ.

ವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕಾದ ಪರಮಾಣು ತಜ್ಞೆಯನ್ನು ಅಮೆರಿಕಾದ  ಪರಮಾಣು ಇಂಧನ ವಿಭಾಗದ  ಪ್ರಮುಖ ಆಡಳಿತಾಧಿಕಾರಿಯ ಸ್ಥಾನಕ್ಕೆ ನೇಮಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿದ್ದಾರೆ.

ಭಾರತೀಯ ಮೂಲದ ರೀಟಾ ಬರನ್ವಾಲ್ ಅವರನ್ನು  ಪರಮಾಣು ಇಂಧನ ವಿಭಾಗದ ಸಹಾಯಕ ಕಾರ್ಯದರ್ಶಿ ಆಗಿ ನಾಮನಿರ್ದೇಶನಗೊಳಿಸಲು ಟ್ರಂಪ್ ಉತ್ಸುಕರಾಗಿದ್ದಾರೆ.

ರೀಟಾ ಬರನ್ವಾಲ್ ಪ್ರಸ್ತುತ  GAIN ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಮಾಣು ಇಂಧನ ವಿಭಾಗದ ಕಾರ್ಯದರ್ಶಿಯಾಗಿ ಅವರ ನೇಮಕವನ್ನು ಸೆನೆಟ್ ಒಪ್ಪಿದರೆ, ಬರನ್ವಾಲ್ ಅತ್ಯಂತ ಪ್ರಮುಖವಾದ ಪರಮಾಣು ಇಂಧನದ ಮುಖ್ಯಸ್ಥೆಯಾಗಲಿದ್ದಾರೆ.

ರೀಟಾ ಬರನ್ವಾಲ್ ಪರಮಾಣು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ದಿ, ಮತ್ತು ಪರಮಾಣು ತಂತ್ರಜ್ಞಾನ ಮೂಸೌಕರ್ಯ ನಿರ್ವಹಣಾ ಇಲಾಖೆ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.

ಈ  ಹಿಂದೆ ವಾಸಿಂಗ್ಟನ್ ಹೌಸ್ ನಲ್ಲಿ  ತಂತ್ರಜ್ಞಾನ ಅಭಿವೃದ್ದಿ ಮತ್ತು ಅಪ್ಲಿಕೇಷನ್ ವಿಭಾಗದ ನಿರ್ದೇಶಕರಾಗಿ ಮತ್ತು ಬೆಚೆಲ್ ಬೆಟ್ಟಿಸ್ ನ ಮೆಟೀರಿಯಲ್ಸ್ ತಂತ್ರಜ್ಞಾನ ವಿಭಾಗದ ಮ್ಯಾನೇಜರ್ ಆಗಿ ರೀಟಾ ಬರನ್ವಾಲ್ ಸೇವೆ ಸಲ್ಲಿಸಿದ್ದು, ಅಮೆರಿಕಾದ ನೌಕಾ ರಿಯಾಕ್ಟರ್ ನ ಪರಮಾಣು ಇಂಧನ ಸಲಕರಣೆಗಳ ಅಭಿವೃದ್ದಿ ಮತ್ತು ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಬರನ್ವಾಲ್ ಎಂಐಟಿಯಿಂದ  ಮೆಟಿರಿಯಲ್ಸ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಪದವಿ ಗಳಿಸಿದ್ದು, ಮಿಚಿಗನ್ ವಿಶ್ವವಿದ್ಯಾಲಯದಿಂದ ಪಿಹೆಚ್ ಡಿ ಪದವಿ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com