ನೇಪಾಳದಲ್ಲಿ ಹಿಮಕುಸಿತ: 9 ಮಂದಿ ಹಿಮಸಮಾಧಿ

ಭಾರೀ ಪ್ರಮಾಣದ ಹಿಮಕುಸಿತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಠ್ಮಂಡು: ಭಾರೀ ಪ್ರಮಾಣದ ಹಿಮಕುಸಿತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ. 
ಮೃತಪಟ್ಟಿರುವ 9 ಮಂದಿಯ ಪೈಕಿ 5 ಮಂದಿ ದಕ್ಷಿಣ ಕೊರಿಯಾ ಪ್ರಜೆಗಳು, ಉಳಿದವರು ಅವರ ಸಹಾಯಕ್ಕೆ ನಿಯೋಜನೆಗೊಂಡಿದ್ದ ನೇಪಾಳ ಸಿಬ್ಬಂದಿ ಎಂದು ತಿಳಿದುಬಂದಿದೆ. 
ಪಶ್ಚಿಮ ನೇಪಾಳದಲ್ಲಿರುವ ಗುರ್ಜಾ ಪರ್ವ 7193 ಮೀಟರ್ ಎತ್ತರವಿದೆ. ಈ ಪರ್ವತವನ್ನು ಏರುವ ಉದ್ದೇಶದಿಂದ 3500 ಮೀಟರ್ ಎತ್ತರದ ಬೇಸ್ ಕ್ಯಾಂಪ್ ತಲುಪಿದ್ದ ಪರ್ವತಾರೋಹಿಗಳು ಸೂಕ್ತ ವಾತಾವರಣಕ್ಕಾಗಿ ಶುಕ್ರವಾರ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಭಾರಿ ಪ್ರಮಾಣದ ಹಿಮ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ಭೂಕುಸಿತವೂ ಉಂಟಾಗಿದೆ. ಹೀಗಾಗಿ ಪರ್ವತಾರೋಹಿಗಳು ಹಿಮಸಮಾಧಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com