ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ: ಪ್ರಧಾನಿ ಇಮ್ರಾನ್ ಖಾನ್

ಭವಿಷ್ಯದಲ್ಲಿ ಯಾವುದೇ ದೇಶದ ಪರವಾಗಿ ಪಾಕಿಸ್ತಾನ ಯುದ್ದಕ್ಕೆ ಇಳಿಯುವುದಿಲ ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ,
ಇಮ್ರಾನ್ ಖಾನ್
ಇಮ್ರಾನ್ ಖಾನ್
ಇಸ್ಲಾಮಾಬಾದ್: ಭವಿಷ್ಯದಲ್ಲಿ ಯಾವುದೇ ದೇಶದ ಪರವಾಗಿ ಪಾಕಿಸ್ತಾನ ಯುದ್ದಕ್ಕೆ ಇಳಿಯುವುದಿಲ ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ, ತಾವು ಪ್ರಾರಂಭದಿಂದಲೂ ಯುದ್ಧದ ವಿರೋಧಿಗಳಾಗಿದ್ದು ನಮ್ಮ ಸರ್ಕಾರದ ವಿದೇಶಾಂಗ ನೀತಿ ಸಹ ಪಾಕಿಸ್ತಾನದ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂದರು.
ರಾವಲ್ಪಿಂಡಿ ಮುಖ್ಯ ಕಛೇರಿಯಲ್ಲಿ ಆಯೋಜಿಸಿದ್ದ ಡಿಫೆನ್ಸ್ ಆಂಡ್ ಮರ್ತ್ಯರ್ಸ್ ಡೇ (ರಕ್ಷಣಾ ಮತ್ತು ಹುತಾತ್ಮರ ದಿನ) ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಭಯೋತ್ಪಾದನೆ ಯುದ್ಧದ ಕಾರಣದಿಂದ ಉಂಟಾದ ದುರಂತ ಮತ್ತು ನೋವಿನ ಕುರಿತು ಮಾತನಾಡಿದ  ಖಾನ್, "ನಾನು ಈ ಯುದ್ಧದಿಂದ ಆರಂಭದಿಂದಲೂ ದೂರವಿದ್ದೇನೆ" ಎಂದಿದ್ದಾರೆ.
ಭಯೋತ್ಪಾದನೆಯನ್ನು ಎದುರಿಸಲು ಸನ್ನದ್ದವಾಗಿರುವ, ಅದರ ವಿರುದ್ಧ ಸೆಣೆಸುತ್ತಿರುವ ಪಾಕ್ ನ ಸಶಸ್ತ್ರ ಪಡೆಗಳನ್ನು ಪ್ರಧಾನಿ ಖಾನ್ ಶ್ಲಾಘಿಸಿದ್ದಾರೆ.
ಜಗತ್ತಿನಲ್ಲಿ ಪಾಕಿಸ್ತಾನ ಸೈನ್ಯದಷ್ಟು ಪ್ರಮಾಣದಲ್ಲಿ ಭಯೋತ್ಪಾದಕರೊಡನೆ ಹೋರಾಟ ನಡೆಸಿದ ಇನ್ನೊಂದು ಸೈನ್ಯವಿಲ್ಲ ಎಂದು ಖಾನ್ ಹೇಳಿದ್ದಾರೆ.ದೇಶವನ್ನು ಎಲ್ಲಾ ಬೆದರಿಕೆ ಹಾಗೂ ಭಯೋತ್ಪಾದನೆಗಳಿಂದ ಕಾಪಾಡುವಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಮಾನವ ಸಂಪನ್ಮೂಲದ ಕುರಿತು ಮಾತನಾಡಿದ ಖಾನ್ ದೇಶದಲ್ಲಿ ಮಕಳನ್ನು ಶಾಲೆ ಕಳುಹಿಸಿ, ಆಸ್ಪತ್ರೆಗಳ ನಿರ್ಮಾಣ ಯೋಗ್ಯ ಮೂಲಭೂತ ಸೌಕರ್ಯ ನಿರ್ಮಾಣ ಸೇರಿ ಅನೇಕ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರತಿ ನಾಗರಿಕನೂ ಸಮಾನವಾಗಿರುವ ಮೊದಲ ಮುಸ್ಲಿಂ ರಾಜ್ಯ ಮದೀನಾ ಮಾದರಿಯನ್ನು ನಾವು ಅನುಸರಿಸಬೇಕು ಎಂದಿದ್ದಾರೆ.
"ಮದೀನಾ ರಾಜ್ಯದ ಸುವರ್ಣ ತತ್ವಗಳನ್ನು ಅನುಸರಿಸುವ ಮೂಲಕ ಸರ್ಕಾರದ ಎಲ್ಲಾ ವಲಯಗಳಲ್ಲಿ ಅರ್ಹತೆ ಮತ್ತು ಪಾರದರ್ಶಕತೆ ತರುವುದು ನನ್ನ ಗುರಿ"ಅವರು ಹೇಳಿದರು.ಪಾಕಿಸ್ತಾನವು ಅಪಾರ ಸಂಪನ್ಮೂಲಗಳನ್ನು ಹೊಂದಿದೆ ನಾವು ಖನಿಜಗಳು, ವೈವಿಧ್ಯಮಯ ಭೂಗೋಳ ಸಮೃದ್ದ ಋತುಗಳನ್ನು ಹೊಂದಿದ್ದೇವೆ.ದೇಶವನ್ನು ಅಭಿವೃದ್ದಿಗೊಳಿಸಲು  ಗುರಿಯನ್ನು ಅರ್ಥಮಾಡಿಕೊಳ್ಳುವ ಏಕೈಕ ಅಗತ್ಯವಿದೆ, ನಮ್ಮ ಸರ್ಕಾರ ಈ ಗುರಿಯತ್ತ ಸಾಗುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.
ನಾಗರಿಕ ಆಡಳಿತ ಮತ್ತು ಮಿಲಿಟರಿ ನಡುವಿನ ವ್ಯತ್ಯಾಸವನ್ನು ನಿರಾಕರಿಸುವ ಖಾನ್ ದೇಶವು ಎದುರಿಸುತ್ತಿರುವ ಸಮಸ್ಯೆಗೆಲ್ಲಾ ಒಂದೇ ರೀತಿಯ ಪರಿಹಾರವಿದೆ ಎಂದು ಹೇಳಿದ್ದಾರೆ.ಸೇನೆಯು ಪಾಕಿಸ್ತಾನದ ಏಕೈಕಕಾರ್ಯನಿರತ ಸಂಸ್ಥೆಯಾಗಿದೆ, ಇದರಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ.ಎಲ್ಲವನ್ನೂ ಅರ್ಹತೆಯಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯರು, ರಾಜತಾಂತ್ರಿಕರು, ಕ್ರೀಡಾಪಟುಗಳು, ಕಲಾವಿದರಿಂದ  ಸೇರಿ ಸಾಕಷ್ಟು ಸಂಖ್ಯೆಯ ಜನರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com