ಅಮೆರಿಕದ ಬೋಸ್ಟನ್ ನಲ್ಲಿ 70 ಕಡೆ ಅನಿಲ್ ಪೈಪ್ ಸ್ಫೋಟ, ಸಾವಿರಾರು ಮಂದಿಯ ರಕ್ಷಣೆ

ಉತ್ತರ ಬೋಸ್ಟನ್ ನ ಮೂರು ನಗರಗಳಲ್ಲಿ ಬರೊಬ್ಬರಿ 70 ಅನಿಲ ಪೈಪ್ ಗಳ ಸ್ಫೋಟ ಸಂಭವಿಸಿದ್ದು, ಕನಿಷ್ಠ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅನಿಲ್ ಪೈಪ್ ಸ್ಫೋಟ
ಅನಿಲ್ ಪೈಪ್ ಸ್ಫೋಟ
ಬೋಸ್ಟನ್: ಉತ್ತರ ಬೋಸ್ಟನ್ ನ ಮೂರು ನಗರಗಳಲ್ಲಿ ಬರೊಬ್ಬರಿ 70 ಅನಿಲ ಪೈಪ್ ಗಳ ಸ್ಫೋಟ ಸಂಭವಿಸಿದ್ದು, ಕನಿಷ್ಠ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಲಾರೆನ್ಸ್, ಆಂಡೋವರ್ ಮತ್ತು ನಾರ್ಥ್ ಆಂಡೋವರ್ ನಗರಗಳಲ್ಲಿ ಗುರುವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದೆ ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ. ಅನಿಲ ಸ್ಫೋಟಗೊಂಡ ಪ್ರದೇಶದಲ್ಲಿ ಭಾರಿ ಪ್ರಮಾಣದ ಅನಿಲ್ ಸೋರಿಕೆಯಾಗುತ್ತಿದ್ದು, ಸುಮಾರು 20 ರಿಂದ ಕಿ.ಮೀ ವ್ಯಾಪ್ತಿವರೆಗೂ ಅನಿಲ ಸೋರಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ.
 ಸದ್ಯ ಎಲ್ಲ ಗ್ಯಾಸ್ ಲೈನ್ ಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಸರಿಪಡಿಸಲು ಕೆಲ ದಿನಗಳು ಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಇನ್ನು ಸ್ಫೋಟಕ್ಕೆ ಕಾರಣ ಏನೆಂದು ಈಗ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ತಹಬಂದಿಗೆ ಬಂದ ನಂತರ ಜಂಟಿ ತನಿಖೆ ನಡೆಸಲಾಗುವುದು ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com