ಭಾರತ ಮಾತುಕತೆಗೆ ಹಿಂಜರಿಯಲು ದೇಶಿಯ ರಾಜಕೀಯ ನಿರ್ಬಂಧಗಳು ಕಾರಣ: ಪಾಕ್

ಭಾರತ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಹಿಂದೇಟು ಹಾಕುತ್ತಿರುವುದಕ್ಕೆ ಆ ದೇಶದ ರಾಜಕೀಯ...
ಶಾಹ್ ಮೆಹಮ್ಮೂದ್ ಖುರೇಶಿ
ಶಾಹ್ ಮೆಹಮ್ಮೂದ್ ಖುರೇಶಿ
ಇಸ್ಲಾಮಾಬಾದ್: ಭಾರತ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಹಿಂದೇಟು ಹಾಕುತ್ತಿರುವುದಕ್ಕೆ ಆ ದೇಶದ ರಾಜಕೀಯ ನಿರ್ಬಂಧಗಳು ಕಾರಣ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮ್ಮೂದ್ ಖುರೇಶಿ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಖುರೇಶಿ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸರ ಬರ್ಬರ ಹತ್ಯೆ ಮತ್ತು ಪಾಕಿಸ್ತಾನ ಹತ್ಯೆಯಾದ ಉಗ್ರ ಬುರ್ಹಾನ್ ವನಿ ಅಂಚೆ ಚೀಟಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮಾತುಕತೆ ರದ್ದಾಗಿತ್ತು.
ಪಾಕಿಸ್ತಾನದ ನೂತನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಭಾರತಕ್ಕೆ ಏಕೆ ಇಷ್ಟ ಇಲ್ಲ? ಎಂದು ಪ್ರಶ್ನಿಸಿದ ಖುರೇಶಿ, ರಾಜಕೀಯ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಹಿಂದೆ ಸರಿಯಲಾಗಿದೆ. ಅವರು ಮತದಾರರಿಗೆ ಹೆದರುತ್ತಾರೆ ಎಂದಿದ್ದಾರೆ.
ಭಾರತ ಮಾತ್ರ ಭಯೋತ್ಪಾದನೆ ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com