ಸಾರ್ಕ್ ಸಭೆಯಲ್ಲಿ ಹಿನ್ನಡೆ: ಸುಷ್ಮಾ ಸ್ವರಾಜ್ ವಿರುದ್ಧ ವೈಯಕ್ತಿಕ ಟಾರ್ಗೆಟ್ ಗೆ ಇಳಿದ ಪಾಕಿಸ್ತಾನ ಸಚಿವ!

ನಿರಂತರವಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಪಾರ್ಶ್ವದಲ್ಲಿ ನಡೆದ ಸಾರ್ಕ್ ಸಭೆಯಲ್ಲೂ ಹಿನ್ನಡೆಯುಂಟಾಗಿದೆ.
ಕುರೇಷಿ
ಕುರೇಷಿ
ನ್ಯೂಯಾರ್ಕ್: ನಿರಂತರವಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಪಾರ್ಶ್ವದಲ್ಲಿ ನಡೆದ ಸಾರ್ಕ್ ಸಭೆಯಲ್ಲೂ ಹಿನ್ನಡೆಯುಂಟಾಗಿದೆ. ಭಾರತ ಪಾಕಿಸ್ತಾನದೊಂದಿಗೆ ಮಾತುಕತೆಗೆ ನಿರಾಕರಿಸಿರುವುದಕ್ಕೆ ಆಕ್ರೋಶಗೊಂಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಷಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. 
ಸುಷ್ಮಾ ಸ್ವರಾಜ್ ಅವರು ದುರ್ಬಲರಾಗಿರುವುದನ್ನು ಕಂಡು ನನಗೆ ಆತಂಕವಾಯಿತು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಹಾಸ್ಯ ಮಾಡಿದ್ದು, ಸುಷ್ಮಾ ಸ್ವರಾಜ್ ಅವರು ಆತಂಕಕ್ಕೊಳಗಾದಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ. 
ಸಾರ್ಕ್ ಸಭೆಯಲ್ಲಿ ಸುಷ್ಮಾ ಸ್ವರಾಜ್ ಪಾಕ್ ವಿದೇಶಾಂಗ ಸಚಿವರೊಂದಿಗೆ ಮಾತನಾಡುವುದಕ್ಕೆ ನಿರಾಕರಿಸಿದ್ದರು. ಅಷ್ಟೇ ಅಲ್ಲದೇ ಪಾಕ್ ವಿದೇಶಾಂಗ ಸಚಿವರ ಭಾಷಣಕ್ಕೂ ಇರದೇ ನಿರ್ಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಕ್ ವಿದೇಶಾಂಗ ಸಚಿವರು ಸುಷ್ಮಾ ಸ್ವರಾಜ್ ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com