ಡೊನರ್ ಬಿಟ್ಟು ತನ್ನದೇ ವೀರ್ಯ ಬಳಿಸಿ 49 ಮಕ್ಕಳಿಗೆ ತಂದೆಯಾಗಿದ್ದ ಡಚ್ ಡಾಕ್ಟರ್!

ಸಂತಾನವಿಲ್ಲದ ಮಹಿಳೆಯರಿಗೆ ಐವಿಎಫ್ ಮೂಲಕ ಸಂತಾನ ಭಾಗ್ಯ ಕಲ್ಪಿಸುವ ಯೋಜನೆ ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಈ ಐವಿಎಫ್ ವೀರ್ಯದಾನಿಗಳ ಹೆಸರನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನೆದರ್ಲ್ಯಾಂಡ್: ಸಂತಾನವಿಲ್ಲದ ಮಹಿಳೆಯರಿಗೆ ಐವಿಎಫ್ ಮೂಲಕ ಸಂತಾನ ಭಾಗ್ಯ ಕಲ್ಪಿಸುವ ಯೋಜನೆ ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಈ ಐವಿಎಫ್ ವೀರ್ಯದಾನಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಆದರೆ ಇಲ್ಲೊಬ್ಬ ಡಾಕ್ಟರ್ ತನ್ನದೇ ವೀರ್ಯ ಬಳಿಸಿ 49 ಮಕ್ಕಳಿಗೆ ತಂದೆಯಾಗಿದ್ದಾನೆ. 
89 ವರ್ಷದ ಡಚ್ ಡಾಕ್ಟರ್ ಕಾರ್ಬಾತ್ ಎಂಬಾತನ ಕ್ಲಿನಿಕ್ ನಲ್ಲಿ ಅಕ್ರಮ ಗರ್ಭಧಾರಣೆಯಿಂದ 60 ಮಕ್ಕಳ ಜನನವಾಗಿದೆ ಎಂಬ ಕಾರಣಕ್ಕೆ 2009ರಲ್ಲಿ ಈ ಕ್ಲಿನಿಕ್ ಅನ್ನು ಮುಚ್ಚಲಾಗಿತ್ತು. ಇದರಲ್ಲಿ 49 ಮಕ್ಕಳು ಡಾಕ್ಟರ್ ಕಾರ್ಬಾತದೆ ಆಗಿತ್ತು. ಈತ 2017ರಲ್ಲಿ ಮೃತಪಟ್ಟಿದ್ದನು. 
ಕೃತಕ ಗರ್ಭಧಾರಣೆ, ಪುರಷರಲ್ಲಿ ವೀರ್ಯ ಕಡಿಮೆ ಪ್ರಮಾಣದಲ್ಲಿ ಇರುವ ಮಹಿಳೆಯರು ವೀರ್ಯ ದಾನಿಗಳನ್ನು ಹುಡುಕುತ್ತಾರೆ. ವೀರ್ಯದಾನಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಇದನ್ನು ಹಸ್ತ್ರವಾಗಿಟ್ಟುಕೊಂಡು ಕಾರ್ಬಾತ್ ತನ್ನದೇ ವೀರ್ಯವನ್ನು ಬಳಸುತ್ತಿದ್ದ. 
ಡಿಎನ್ಎ ಪರೀಕ್ಷೆ ನಡೆಸಿದಾಗ ಸುಮಾರು 49 ಮಕ್ಕಳು ಕಾರ್ಬಾತ್ ನದ್ದೆ ಎಂಬುದು ಬಹಿರಂಗಗೊಂಡಿದೆ. ಈ ಮೂಲಕ ತನ್ನ ಕ್ಲಿನಿಕ್ ಗೆ ಬರುತ್ತಿದ್ದ ಮಹಿಳೆಯರಿಗೆ ತನ್ನದೇ ವೀರ್ಯವನ್ನು ಗರ್ಭಧಾರಣೆ ಮೂಲಕ ಸಂತಾನ ಭಾಗ್ಯ ನೀಡುತ್ತಿದ್ದರು ಸಾಭೀತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com