ಆರ್ಟಿಕಲ್ 370, ಪಾಕ್ ಒಂಟಿ! ಭಾರತ ನೆರೆ ರಾಷ್ಟ್ರದ ಆರೋಪ ಅರಣ್ಯ ರೋಧನವಾಗಿಸಿದ್ದು ಹೇಗೆ ಗೊತ್ತೇನು?

ಭಾರತ ಕಾಶ್ಮೀರ ಕ್ರಾಂತಿ ಯಶಸ್ವಿಯಾಗುತ್ತಿದ್ದಂತೆಯೇ ಪಾಕಿಸ್ತಾನದ ಕೂಗು ಜೋರಾಗಿಯೇ ಇತ್ತು. ಎಚ್ಚರಿಕೆಯಿಂದ ಮೊದಲುಗೊಂಡು ಬೆದರಿಕೆ ವರೆಗೂ ಎಲ್ಲ ಹೇಳಿಕೆಗಳೂ ಬಂದ್ದಿದ್ದವು.
ಆರ್ಟಿಕಲ್ 370, ಪಾಕ್ ಒಂಟಿ! ಭಾರತ ನೆರೆ ರಾಷ್ಟ್ರದ ಆರೋಪ ಅರಣ್ಯ ರೋಧನವಾಗಿಸಿದ್ದು ಹೇಗೆ ಗೊತ್ತೇನು?
Updated on

ನವದೆಹಲಿ: ಭಾರತ ಕಾಶ್ಮೀರ ಕ್ರಾಂತಿ ಯಶಸ್ವಿಯಾಗುತ್ತಿದ್ದಂತೆಯೇ ಪಾಕಿಸ್ತಾನದ ಕೂಗು ಜೋರಾಗಿಯೇ ಇತ್ತು. ಎಚ್ಚರಿಕೆಯಿಂದ ಮೊದಲುಗೊಂಡು ಬೆದರಿಕೆ ವರೆಗೂ ಎಲ್ಲ ಹೇಳಿಕೆಗಳೂ ಬಂದ್ದಿದ್ದವು. ಇದರ ಹಿಂದಿರುವುದು ಪಾಕಿಸ್ತಾನ ಸೇನೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಭಾರತ ಇದ್ಯಾವುದಕ್ಕೂ ಜಗ್ಗದೇ ಪಾಕಿಸ್ತಾನವನ್ನು ಈಗ ಮತ್ತೊಮ್ಮೆ ಒಬ್ಬಂಟಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. 

ಭಾರತ ಆರ್ಟಿಕಲ್ 370 ರದ್ದುಗೊಳಿಸುತ್ತಿದ್ದಂತೆಯೇ ವಿಶ್ವಸಂಸ್ಥೆ ಕದ ತಟ್ಟಿದ ಪಾಕಿಸ್ತಾನ ಭಾರತ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಕ್ರಮ ನಿರ್ಧಾರ ತೆಗೆದುಕೊಂಡಿದ್ದು, ವಿವಾದಿತ ಕಾಶ್ಮೀರ ಪ್ರದೇಶದ ಪರಿಸ್ಥಿತಿಯ ವಸ್ತುಶಃ ಬದಲಾವಣೆ ಮಾಡಿದೆ, ಇದು 1948 ರ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ 48ರ ಉಲ್ಲಂಘನೆ ಎಂದು ಆರೋಪಿಸಿತ್ತು. 

ಇದಕ್ಕೆ ಸಮರ್ಥವಾಗಿ ಉತ್ತರಿಸಿದ್ದ ಭಾರತ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ನ್ನು ಸಂವಿಧಾನಕ್ಕೆ ಸೇರಿಸಿದ್ದು1954 ರಲ್ಲಿ. 370 ಜಾರಿಯಾಗುವ ವೇಳೆಗೆ ವಿಶ್ವಸಂಸ್ಥೆ ನಿರ್ಣಯ ಜಾರಿಗೆ ಬಂದು 6 ವರ್ಷಗಳು ಕಳೆದಿದ್ದವು. ಈಗ 2019 ರಲ್ಲಿ 370 ರದ್ದಾಗಿದೆ. 370 ಸೇರಿದ್ದು ಹಾಗೂ ರದ್ದುಗೊಂಡಿದ್ದು ಎರಡೂ ಸಹ ವಿಶ್ವಸಂಸ್ಥೆ ನಿರ್ಣಯದ ನಂತರದ ಘಟನೆಗಳು. ಪಾಕಿಸ್ತಾನ ಆರೋಪಿಸುವಂತೆ 370 ಸೇರಿಸುವಾಗ ಕಾಶ್ಮೀರದಲ್ಲಿ ಆಗದೇ ಇರುವ ಪರಿಸ್ಥಿತಿಯ ವಸ್ತುಶಃ ಬದಲಾವಣೆ (material change of the situation) ಆರ್ಟಿಕಲ್ 370ಯನ್ನು ರದ್ದುಗೊಳಿಸಿದಾಗ ಹೇಗೆ ಆಗುತ್ತೆ ಎಂದು ವಾದ ಮಂಡಿಸಿದೆ. ಭಾರತದ ವಾದವನ್ನು ಜಾಗತಿಕ ಸಮುದಾಯ ಮಾನ್ಯ ಮಾಡಿದ್ದು, ವಿಶ್ವಸಂಸ್ಥೆ, ಅಮೆರಿಕ, ಚೀನಾ ಆದಿಯಾಗಿ ಎಲ್ಲರೂ ಭಾರತಕ್ಕೆ ಬೆಂಬಲಿಸುವಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com