ಕೇವಲ 24 ಗಂಟೆಗಳಲ್ಲಿ 109 ಉಗ್ರರ ಹೊಡೆದುರುಳಿಸಿದ ಆಫ್ಘನ್ ಸೇನೆ!

ಮಹತ್ತರ ಕಾರ್ಯಾಚರಣೆಯಲ್ಲಿ ಆಫ್ಘಾನಿಸ್ತಾನ ಸೇನಾಪಡೆಗಳು ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 109 ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಮಹತ್ತರ ಕಾರ್ಯಾಚರಣೆಯಲ್ಲಿ ಆಫ್ಘಾನಿಸ್ತಾನ ಸೇನಾಪಡೆಗಳು ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 109 ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಸುದ್ಧಿಸಂಸ್ಥೆಯೊಂದು ವರದಿ ಮಾಡಿದ್ದು, ಆಫ್ಘಾನಿಸ್ತಾನದ 15ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳ ಮೇಲೆ ಆಫ್ಘನ್ ಸೇನೆ 18 ಕಾರ್ಯಾಚರಣೆ ಮಾಡಿದ್ದು, ಈ ವೇಳೆ ಉಗ್ರರು ಮತ್ತು ಸೈನಿಕರ ನಡುವೆ ಭೀಕರ ಗುಂಡಿನ ಕಾಳಗ ನಡೆದಿದೆ. ಈ ಗುಂಡಿನ ಕಾಳಗದಲ್ಲಿ ಕನಿಷ್ಠ 100 ಉಗ್ರರು ಹತರಾಗಿದ್ದು ಹಲವು ಉಗ್ರರು ಗಾಯಗೊಂಡಿದ್ದಾರೆ. ಅಂತೆಯೇ ಈ ಕಾರ್ಯಾಚರಣೆಯಲ್ಲಿ ಐದು ಉಗ್ರರನ್ನು ಜೀವಂತ ಸೆರೆ ಹಿಡಿಯಲಾಗಿದ್ದು, ಕಾರ್ಯಾಚರಣೆ ಹಲವು ಆಫ್ಘನ್ ಸೈನಿಕರೂ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆ ಕುರಿತಂತೆ ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಕೂಡ ಟ್ವೀಟ್ ಮಾಡಿದ್ದು, ಏರ್ ಸ್ಟ್ರೈಕ್, ಸೈನಿಕರ ಗುಂಡಿನ ದಾಳಿ ಸೇರಿದಂತೆ ವಿವಿಧ ಕಾರ್ಯಾಚರಣೆಯಲ್ಲಿ ಒಟ್ಟು 109 ಉಗ್ರರು ಹತರಾಗಿದ್ದಾರೆ ಎಂದು ಟ್ವೀಟ್ ಮಾಡಿದೆ. ಆಫ್ಘಾನಿಸ್ತಾನದ ಕಪಿಸಾ, ಲಘ್ಮನ್, ಲೋಗಾರ್, ಪಕ್ತಿಕಾ, ಮುಹಮದ್ ಅಘಾ, ಅಲಿಶೀಯಿಂಗ್ ಮತ್ತು ಘಜ್ನಿ ಜಿಲ್ಲೆಗಳ ವಿವಿಧ ಉಗ್ರ ಕ್ಯಾಂಪ್ ಗಳ ಮೇಲೆ ಸೇನೆ ದಾಳಿ ಮಾಡಿದ್ದು, ಈ ವೇಳೆ ಕಾರ್ಯಾಚರಣೆಯಲ್ಲಿ ಹಖ್ಖಾನಿ ನೆಟ್ವರ್ಕ್, ತಾಲಿಬಾನ್ ಮತ್ತು ಇತರೆ ಸ್ಥಳೀಯ ಉಗ್ರಗಾಮಿ ಸಂಘಟನೆಗಳ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದೆ.

ಒಟ್ಟಾರೆ ಅಮೆರಿಕ ಸೇನೆ ತನ್ನ ಸೈನಿಕ ಕಡಿತಗೊಳಿಸಿದ ಬಳಿಕ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಏಕಾಂಗಿ ಹೋರಾಡುತ್ತಿರುವ ಆಫ್ಘನ್ ಸೇನಾ ಪಡೆಗಳಿಗೆ ನಿನ್ನೆಯ ಕಾರ್ಯಾಚರಣೆ ನೈತಿಕ ಬಲ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com