ಸಿರಿಯಾದಲ್ಲಿ ಭೀಕರ ಆತ್ಮಹತ್ಯಾ ದಾಳಿ: 15 ಸಾವು, ಹಲವರು ಗಂಭೀರ

ಸಿರಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಗೈದಿದ್ದು, ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿ ಹಲವರು ಗಂಭೀರವಾಗಿದ್ದಾರೆ.
ಉಗ್ರ ದಾಳಿಗೆ ಛಿದ್ರವಾಗಿರುವ ಕಟ್ಟಡ
ಉಗ್ರ ದಾಳಿಗೆ ಛಿದ್ರವಾಗಿರುವ ಕಟ್ಟಡ
ಬೈರುತ್: ಸಿರಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಗೈದಿದ್ದು, ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿ ಹಲವರು ಗಂಭೀರವಾಗಿದ್ದಾರೆ.
ಉತ್ತರ ಸಿರಿಯಾದ ಮನ್ಬಿಜ್ ಪಟ್ಚಣದಲ್ಲಿ ಈ ದಾಳಿ ಸಂಭವಿಸಿದ್ದು, ದಾಳಿ ವೇಳೆ ಸ್ಥಳದಲ್ಲೇ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೇ ವಿಚಾರವಾಗಿ ಮಾಹಿತಿ ನೀಡಿರುವ ಬ್ರಿಟನ್ ಮೂಲದ ಮಾನವ ಹಕ್ಕು ಸಂರಕ್ಷಣಾ ಸಂಘಟನೆಯೊಂದು ಆತ್ಮಹತ್ಯಾ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದು, ಈ ಪೈಕಿ 9 ಮಂದಿ ನಾಗರಿಕರು ಮತ್ತು 7 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಯುದ್ಧ ಪೀಡಿತ ಸಿರಿಯಾದಿಂದ ಅಮೆರಿಕ ಸರ್ಕಾರ ತನ್ನ ರಕ್ಷಣಾ ಪಡೆಗಳನ್ನು ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ ಕೆಲವೇ ವಾರಗಳಲ್ಲಿ ಈ ದಾಳಿ ನಡೆದಿದ್ದು, ಈ ಬಗ್ಗೆ ಅಮೆರಿಕ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಮಾತನಾಡಿರುವ ಅಮೆರಿಕ ಮಿಲಿಟರ್ ಕರ್ನಲ್ ಸಿಯಾನ್ ರ್ಯಾನ್ ಅವರು, ಸಿರಿಯಾದಲ್ಲಿ ಸಾಮಾನ್ಯ ಪ್ಯಾಟ್ರಲ್ (ಗಸ್ತು)ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸೈನಿಕರೊಂದಿಗೆ ಅಮಾಯಕ ನಾಗರಿಕರೂ ಕೂಡ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯಲ್ಲಿ ಹಲವು ಕಟ್ಟಡಗಳು ಜಖಂಗೊಂಡಿದ್ದು, ಸ್ಫೋಟದ ರಭಸಕ್ಕೆ ಆ ರಸ್ತೆಯಲ್ಲಿ ನಿಂತಿದ್ದ ಹಲವು ಕಾರುಗಳು ಧ್ವಂಸವಾಗಿವೆ. ಇಡೀ ರಸ್ತೆ ರಕ್ತಸಿಕ್ತವಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com