ಕೈಲಿ ಜೆನ್ನರ್ ವಿಶ್ವ ದಾಖಲೆ ಮುರಿದ ಒಂದು ಮೊಟ್ಟೆ ಕಥೆ ಹಿಂದೆ ಭಾರತೀಯ ಯುವಕನ ಚಾಣಕ್ಷತನ!

ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್​ ನಟಿ ಕೈಲಿ ಜೆನ್ನರ್ ರನ್ನು 2ನೇ ಸ್ಥಾನಕ್ಕೆ ತಳ್ಳಿದ ಮೊಟ್ಟೆ ಕಥೆಯ ಹಿಂದೆ ಭಾರತೀಯ ಮೂಲದ 19 ವರ್ಷದ ಯುವಕ ಇಶಾನ್ ಗೊಯೆಲ್ ಚಾಣಕ್ಷತನ ಕೆಲಸ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್ : ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್​ ನಟಿ ಕೈಲಿ ಜೆನ್ನರ್ ರನ್ನು 2ನೇ ಸ್ಥಾನಕ್ಕೆ ತಳ್ಳಿದ ಮೊಟ್ಟೆ  ಕಥೆಯ ಹಿಂದೆ ಭಾರತೀಯ ಮೂಲದ 19 ವರ್ಷದ ಯುವಕ ಇಶಾನ್ ಗೊಯೆಲ್  ಚಾಣಕ್ಷತನ ಕೆಲಸ ಮಾಡಿದೆ.

ಸಾಮಾಜಿಕ ಜಾಲತಾಣ ಬಳಸುವ ಬಹುತೇಕ ಮಂದಿ  ಈ ಮೊಟ್ಟೆಯನ್ನು ಲೈಕ್ ಮಾಡಿದ್ದಾರೆ. ಇನ್ಸಟಾಗ್ರಾಂನಲ್ಲಿ 50 ಮಿಲಿಯನ್ ಲೈಕ್ ಬಂದಿತ್ತು.  ಇದನ್ನು ಇಷ್ಟೊಂದು ಪ್ರಸಿದ್ಧಿ ಪಡೆಯುವಂತೆ ಮಾಡಿದ್ದವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ದೊರೆತಿದ್ದು, ಮ್ಯಾಸಾಸೂಸೆಟ್  ನ ಯುವಕನಿಗೆ ಅಭಿನಂದನೆಗಳ ಮಹಾಪೂರವೇ  ಹರಿದುಬರುತ್ತಿದೆ.

ಜನವರಿ 4 ರಂದು ಇಂಗ್ಲೆಂಡ್ ಮೊಲದ ಇನ್ಸಾಟಾಗ್ರಾಮ್ ನಲ್ಲಿ ಹಾಕಲಾಗಿದ್ದ ಮೊಟ್ಟೆ ಪೋಟೋ ವಿಶ್ವ ದಾಖಲೆ ಮಾಡಿದ್ದು, ಇದೀಗ 8.6 ಮಿಲಿಯನ್  ಫಾಲೊವರ್ಸ್ ಹೊಂದಿದೆ.

 ಇಶಾನ್ ಗೊಯೆಲ್ ಇತ್ತೀಚಿಗೆ ಸಂದರ್ಶನವೊಂದ ಈ ರಹಸ್ಯ ವಿಚಾರವನ್ನು ಹೇಳಿದದ್ದು ವೈರಲ್ ಆಗಿದೆ.  ತುಂಬಾ ಗಂಭೀರತೆಯಿಂದ ರೆಡಿಟ್ ಫೇಜ್ ನಲ್ಲಿ ಕೆಲಸ ಮಾಡಿದ್ದು, ಮಾಧ್ಯಮಗಳ  ಮೂಲಕ ಬೇಗನೆ ಎಲ್ಲರನ್ನೂ ತಲುಪಿದೆ. ತಮ್ಮ ಸಂಪರ್ಕದಲ್ಲಿದ್ದ ಎಲ್ಲಾ ಸೆಲೆಬ್ರಿಟಿಗಳು ಹಾಗೂ ಬೆಂಬಲಿಗರು ನೆರವು ನೀಡಿರುವುದಾಗಿ  ಇಶಾನ್  ತಿಳಿಸಿದ್ದಾರೆ.

ಮೊಟ್ಟೆ ವ್ಯಕ್ತಿ ಅಲ್ಲ, ಆದರೆ, ಬಹುಮುಖ್ಯವಾಗಿ ಪ್ರತಿನಿಧಿಸುತ್ತದೆ ಆದ್ದರಿಂದಲೇ  ಈ ಪೋಟೋ ಹೆಚ್ಚಿನ ಖ್ಯಾತಿ ಪಡೆಯಿತು ಎಂದು ಇಶಾನ್ ಹೇಳುತ್ತಾರೆ. ಮೊಟ್ಟೆ ಇಡುವ ಕೋಳಿಗೂ  ಇಶಾನ್ ಕ್ರೇಡಿಟ್ ನೀಡುತ್ತಾರೆ.

 ಸೆಲೆಬ್ರಿಟಿಗಳು ಹಾಗೂ ಅನೇಕ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಮೊಟ್ಟೆ ಬಗ್ಗೆ ವೀಕ್ಷಕ ವಿವರಣೆ ನೀಡಿದ್ದರಿಂದ ಸಮಾಜದಲ್ಲಿ ಪರಿಣಾಮ ಬೀರುವಲ್ಲಿ ನೆರವಾಯಿತು. ವೈರಲ್ ಆಗಿದ್ದ ಮೊಟ್ಟೆ ಒಂದು ಸ್ಟಾಕ್ ಇಮೇಜ್ , ಅದನ್ನು ಸರ್ಜಿ ಪ್ಲಾಟೊನೊವಾ ಎಂಬುವರು ತೆಗೆದಿದ್ದರು. ಈ ಪೋಟೋವನ್ನು ಫೇಪರ್  ಮ್ಯಾಗಜೀನ್  ಕವರ್ ಪೋಟೋ ಆಗಿ ಬಳಸಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕೈಲಿ ಜೆನ್ನರ್ ರ ಒಂದು ಫೋಟೋಗೆ ದಾಖಲೆಯ ಸುಮಾರು 18 ಮಿಲಿಯನ್ ಲೈಕ್​ ಸಿಕ್ಕಿತ್ತು. ಆದರೆ ಈ ದಾಖಲೆಯನ್ನು ಒಂದು ಮೊಟ್ಟೆಯ ಫೋಟೋ ಮುರಿದು ಹಾಕಿದ್ದು. ಅಷ್ಟು ಮಾತ್ರವಲ್ಲದೇ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಮೊದಲ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com