ಐಎಸ್ಐ ನೆರವಿನಿಂದಲೇ ಅಮೆರಿಕ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನೀಡಿದ ಮಾಹಿತಿಯ ಮೇರೆಗೆ ಅಮೆರಿಕ ಸೇನೆ ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನೀಡಿದ ಮಾಹಿತಿಯ ಮೇರೆಗೆ ಅಮೆರಿಕ ಸೇನೆ ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್ ಖಾನ್, ಬಿನ್ ಲಾಡೆನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನೀಡಿದ ಮಾಹಿತಿಯ ಮೇರೆಗೆ ಅಮೆರಿಕ ಸೇನೆ ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.
'ನೀವು ಬಿನ್ ಲಾಡೆನ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಮೆರಿಕ ಗುಪ್ತಚರ ಸಂಸ್ಥೆ ಸಿಐಎಯನ್ನು ಕೇಳಿ.. ಬಿನ್ ಲಾಡೆನ್ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ನೆರವು ನೀಡಿದ್ದೇ ಐಎಸ್ಐ ಸಂಸ್ಥೆ. ಐಎಸ್ಐ ನೀಡಿದ ಮಾಹಿತಿಯನ್ನು ಆಧರಿಸಿಯೇ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು ಎಂದು ಹೇಳಿದ್ದಾರೆ. ಅಂತೆಯೇ ಪಾಕಿಸ್ತಾನ ಅಮೆರಿಕಗಾಗಿ ಉಗ್ರರ ವಿರುದ್ಧ ಹೋರಾಡುತ್ತಿದೆ. ಬಿನ್ ಲಾಡೆನ್ ಸಾವು ಮತ್ತು ಅಮೆರಿಕ ಸೇನೆಯ ಪಾಕಿಸ್ತಾನ ಗಡಿ ಪ್ರವೇಶ ನಮಗೆ ಜಾಗತಿಕ ಮಟ್ಟದಲ್ಲಿ ಮುಜುಗರವನ್ನುಂಟು ಮಾಡಿದ್ದು ನಿಜ... ಎಂದು ಹೇಳಿದ್ದಾರೆ.
ಅಂತೆಯೇ ಅಂದು ಅಮೆರಿಕ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇಲ್ಲವಾದರೇ ನಾವೇ ಒಸಮಾ ಬಿನ್ ಲಾಡೆನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೆವು. ಆದರೆ ಅಮೆರಿಕ ಸೇನೆ ಸಂಪೂರ್ಣವಾಗಿ ಸರ್ವಸನ್ನದ್ಧವಾಗಿ ಬಂದು ತಮ್ಮ ಕಾರ್ಯಾಚರಣೆ ಪೂರ್ಣಗೊಳಿಸಿತು ಎಂದು ಹೇಳಿದ್ದಾರೆ.
ಇದೇ ವೇಳೆ ಬಿನ್ ಲಾಡೆನ್ ಸಾಮಾನ್ಯ ಮನುಷ್ಯನೇನಲ್ಲ. ಆತ ಮೂರು ಸಾವಿರ ಅಮೆರಿಕ ನಾಗರಿಕರನ್ನು ಕೊಂದು ಹಾಕಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಖಾನ್ ನಾವೂ ಕೂಡ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 70 ಸಾವಿರ ಜನರನ್ನು ಕಳೆದುಕೊಂಡಿದ್ದೇವೆ. ಆದರೂ ಅಮೆರಿಕದೊಂದಿಗೆ ಸೇರಿ ಪಾಕಿಸ್ತಾನದಲ್ಲಿ ಉಗ್ರರ ವಿರುದ್ಧ ಯುದ್ಧ ಮಾಡುತ್ತಿದ್ದೇವೆ. ಹೀಗಾಗಿ ಸಾಮಾನ್ಯವಾಗಿಯೇ ಅಮೆರಿಕ ವಿರುದ್ಧ ಜನರಿಗೆ ಕೋಪ ವಿರುತ್ತದೆ. ಆದರೂ ಅವುಗಳನ್ನು ಬದಿಗೊತ್ತಿ ಅಮೆರಿಕಕ್ಕಾಗಿ ನಾವು ಉಗ್ರರ ವಿರುದ್ಧ ಕೆಲಸ ಮಾಡುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದರು. 
ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯಾದರೂ ಕೆಲವೊಮ್ಮೆಕೆಲ ನಿರ್ಣಯಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ. ಇದಕ್ಕೆ ವಿಪಕ್ಷಗಳೂ ಕಾರಣ ಇರಬಹುದು. ಆದರೆ ಲಾಡೆನ್ ವಿಚಾರವಾಗಿ ಪಾಕಿಸ್ತಾನ ಸರ್ಕಾರ ಸಂಧಾನ ಮಾಡಬಹುದಿತ್ತು ಎಂದು ಹೇಳುವ ಮೂಲಕ ಅಂದಿನ ಸರ್ಕಾರದ ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com