ಅಮೆರಿಕಕ್ಕೆ ಚಳ್ಳೆಹಣ್ಣು ತಿನಿಸಿದ್ದ ಪಾಕ್ ನರಿಬುದ್ಧಿ ಬಯಲು, ಯುಎಸ್ ಆಕ್ರೋಶ!

ಭಾರತ ಮೇಲೆ ಪ್ರತೀಕಾರಕ್ಕೆ ಎಫ್-16 ಯುದ್ಧ ವಿಮಾನವನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ನರಿಬುದ್ಧಿ ಇದೀಗ ಜಗಜ್ಜಾಹೀರ್ ಆಗಿದ್ದು ಇದಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಮ್ರಾನ್ ಖಾನ್, ಡೊನಾಲ್ಡ್ ಟ್ರಂಪ್
ಇಮ್ರಾನ್ ಖಾನ್, ಡೊನಾಲ್ಡ್ ಟ್ರಂಪ್
ನವದೆಹಲಿ: ಭಾರತ ಮೇಲೆ ಪ್ರತೀಕಾರಕ್ಕೆ ಎಫ್-16 ಯುದ್ಧ ವಿಮಾನವನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ನರಿಬುದ್ಧಿ ಇದೀಗ ಜಗಜ್ಜಾಹೀರ್ ಆಗಿದ್ದು ಇದಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
ಹೌದು, ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳ ಗಡಿದಾಟಿ ಭಾರತದ ಒಳಗೆ ಬಂದಿದ್ದವು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಪಾಕಿಸ್ತಾನದ ಎಫ್-16 ಒಂದನ್ನು ಹೊಡೆದುರುಳಿಸಿತ್ತು. ಈ ಬಗ್ಗೆ ನಿನ್ನೆ ಭಾರತೀಯ ಸೇನಾ ಮುಖ್ಯಸ್ಥರು ಸುದ್ಧಿಗೋಷ್ಠಿ ನಡೆಸಿ ಸಾಕ್ಷ್ಯ ತೋರಿಸಿದ್ದರು.
ಇನ್ನು ಭಾರತ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸದಂತೆ ಅಮೆರಿಕ ಖಡಕ್ ವಾರ್ನಿಂಗ್ ನೀಡಿತ್ತು. ಅಲ್ಲದೆ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ಈ ಕಾರ್ಯಾಚರಣೆಯಲ್ಲಿ ಬಳಸಬೇಡಿ ಎಂದು ಸೂಚಿಸಿತ್ತು. ಈ ಆದೇಶವನ್ನು ಮೀರಿ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪಾಕಿಸ್ತಾನ ತಾನು ಎಫ್-16 ಅನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿತ್ತು. ಇದನ್ನು ಭಾರತೀಯ ಸೇನೆಯ ಮುಖ್ಯಸ್ಥರು ನಿನ್ನೆ ಬಯಲು ಮಾಡಿದ್ದರಿಂದ ಪಾಕಿಸ್ತಾನದ ನರಿಬುದ್ಧಿ ಬಯಲಾಗಿತ್ತು.
ಇನ್ನು ಅಮೆರಿಕಕ್ಕೆ ಚಳ್ಳೆಹಣ್ಣು ತಿನಿಸಲು ಹೋಗಿ ಇದೀಗ ಪಾಕಿಸ್ತಾನ ಇಂಗು ತಿಂದ ಮಂಗನಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com