ಓಐಸಿ ಸಭೆಯಲ್ಲಿ ಗೌರವ ಅತಿಥಿಯಾಗಿ ಸುಷ್ಮಾ ಸ್ವರಾಜ್ ಭಾಗಿ : ಪಾಕಿಸ್ತಾನ ಬಹಿಷ್ಕಾರ

ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ಎರಡು ದಿನಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ಅಬುದಾಬಿ: ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ಎರಡು ದಿನಗಳ  ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ಮೊದಲ ಬಾರಿಗೆ  ಭಾರತದ ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್  ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಆದರೆ, ಭಾರತದ ಸಚಿವರ ಆಹ್ವಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಸಭೆಯನ್ನು ಬಹಿಷ್ಕರಿಸಿದೆ.

ಪಾಕಿಸ್ತಾನದ  ತೀವ್ರ ಆಕ್ಷೇಪದ ಹೊರತಾಗಿಯೂ 57 ಸದಸ್ಯರನ್ನೊಳಗೊಂಡ ಇಸ್ಲಾಮಿಕ್ ಸಹಕಾರ ಸಂಘಟನೆ  ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆ  ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟ ಅಲ್ಲ,  ಇದು ಸಂಸ್ಕೃತಿ ಅಥವಾ ನಾಗರಿಕತೆ ನಡುವಿನ ಹೋರಾಟವಲ್ಲ, ಇದು ಮಾನವೀಯ  ಮೌಲ್ಯಗಳು ಹಾಗೂ ಅಮಾನವೀಯ ಶಕ್ತಿಗಳ ನಡುವಿನ ಹೋರಾಟವಾಗಿದೆ ಎಂದರು.

ವಿಶ್ವದಲ್ಲಿನ ಎಲ್ಲ ರಾಷ್ಟ್ರಗಳು ಶಾಂತಿ, ಸೌಹಾರ್ದತೆ ಬಯಸುತ್ತವೆ. ಪ್ರತಿಯೊಂದು ಧರ್ಮ ಶಾಂತಿಯನ್ನು ಬೋಧಿಸುತ್ತವೆ.  ಇಸ್ಲಾಂ ಧರ್ಮದಲ್ಲೂ ಇದನ್ನೇ ಹೇಳಲಾಗಿದೆ. ನಾವುಗಳ ಅದರ ಪರವಾಗಿ ನಿಂತುಕೊಳ್ಳಬೇಕಾಗಿದೆ ಎಂದು ಹೇಳಿದ ಸುಷ್ಮಾ ಸ್ವರಾಜ್ ,  ಖುಗ್ವೇದ ಶ್ಲೋಕವೊಂದನ್ನು ಹೇಳಿದರು. ಅಂದರೆ ದೇವರೊಬ್ಬನೇ, ಆದರೆ, ಬಲ್ಲವರು ಅವನನ್ನು ಹಲವು ವಿಧದಲ್ಲಿ ನೋಡುತ್ತಾರೆ ಎಂದು ಹೇಳಿದರು.

 ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು 40 ಸೈನಿಕರ ಮೇಲೆ  ಪಾಕಿಸ್ತಾನದ ಮೂಲದ ಜೈಷ್ - ಇ- ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಂತರ ಪಾಕಿಸ್ತಾನ ಮತ್ತು ಭಾರತ ನಡುವಣ ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿಸಿದರು. ನಾವು ಮಾನವೀಯತೆಯನ್ನು ರಕ್ಷಿಸಬೇಕಾಗಿದೆ. ಭಯೋತ್ಪಾದನೆ ವಿರುದ್ಧ ಎಲ್ಲರೂ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಇಸ್ಲಾಮಿಕ್ ಸಹಕಾ ಸಂಘಟನೆ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನ ಭಾರತದ ಸುಷ್ಮಾ ಸ್ವರಾಜ್ ಅವರಿಗೆ ಆಹ್ವಾನ ನೀಡದಂತೆ ತಡೆಯಲು ಸಾಕಷ್ಟು ಪ್ರಯತ್ನಿಸಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಸಭೆಗೆ ಗೈರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com