ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧ್ವಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಭಾರತ ಜಾಗೃತವಾಗಿರಬೇಕು ಎಂದು ಹೇಳಿದ್ದಾರೆ. ಅಮೆರಿಕಾದೊಂದಿಗೆ ನಮಗೆ ಸುದೀರ್ಘವಾದ ವ್ಯಾಪಾರ ಸಂಬಂಧವಿದೆ. ವ್ಯಾಪಾರ ವಿಭಾಗದಲ್ಲಿನ ಎಲ್ಲಾ ವಿಷಯಗಳೂ ಸಹ ಚರ್ಚೆಗೆ ಮುಕ್ತವಾಗಿದೆ ವೈದ್ಯಕೀಯ ಸಾಧನಗಳ ಲಭ್ಯತೆ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಜಿಎಸ್ ಪಿ ಅಥವಾ ಆದ್ಯತೆಯ ವ್ಯಾಪಾರ ಪಟ್ಟಿಯ ಲಾಭದ ಆರ್ಥಿಕ ಮೌಲ್ಯಗಳು ಮಿತವಾಗಿದೆ ಎಂದು ಅನೂಪ್ ವಾಧ್ವಾನ್ ಹೇಳಿದ್ದಾರೆ.