ಮಸೂದ್ ಅಝರ್
ಮಸೂದ್ ಅಝರ್

ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಸಹೋದರ, ಉಗ್ರ ಸಂಘಟನೆಯ ಇತರ 43 ಮಂದಿ ಬಂಧನ

ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಇಂದು ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ಸಹೋದರ ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ 43 ಸದಸ್ಯರನ್ನು ಬಂಧಿಸಿದೆ.

ಇಸ್ಲಾಮಾಬಾದ್ : ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಇಂದು  ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆ  ಮುಖ್ಯಸ್ಥ ಮಸೂದ್ ಅಝರ್ ಸಹೋದರ  ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ  43 ಸದಸ್ಯರನ್ನು ಬಂಧಿಸಿದೆ.

ಮಸೂದ್ ಅಝರ್ ಸಹೋದರ ಮುಫ್ತಿ ಅಬ್ದುರ್ ರೌಪ್ ಮತ್ತು ಹಮದ್ ಅಝರ್  ಸೇರಿದಂತೆ ಇತರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ನಿಷೇಧಿತ ಎಲ್ಲಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಒಳಾಡಳಿತ ಸಚಿವ ಶಹರಿಯಾರ್ ಖಾನ್ ಅಫ್ರಿದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ ನಿಷೇಧಿತ ಎಲ್ಲಾ ಉಗ್ರ ಸಂಘಟನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು  ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.

ಕಳೆದ ವಾರ ಬಾಲಕೋಟ್ ನಲ್ಲಿ  ವಾಯುದಾಳಿ ನಡೆಸಿದ ಭಾರತ ಮುಪ್ತಿ ಅಬ್ದುರ್ ರೌಪಿ ಮತ್ತು ಹಮೀದ್ ಅಝರ್ , ಆಫ್ರಿದಿ ಮತ್ತಿತರ ಹೆಸರನ್ನು ಪುರಾವೆಯಾಗಿ ಹಂಚಿಕೊಂಡಿತ್ತು. ಆದಾಗ್ಯೂ,ಯಾವುದೇ ಅಂತಾರಾಷ್ಟ್ರೀಯ ಒತ್ತಡಕ್ಕೆ ಹೆದರಿ ಈ ಕ್ರಮ ಕೈಗೊಂಡಿಲ್ಲ ಎಂದು  ಮೊಹಮ್ಮದ್ ಫೈಸಲ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com