ಭಾರತ-ಪಾಕ್ ನಡುವೆ ಪರಮಾಣು ಯುದ್ಧ ಸಾಧ್ಯತೆ ಕಡಿಮೆ: ನ್ಯೂಯಾರ್ಕ್ ಟೈಮ್ಸ್ ವರದಿ

ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಲಲು ನೆರೆ ರಾಷ್ಟ್ರಗಲಾದ ಬಾರತ ಹಾಗೂ ಪಾಕಿಸ್ತಾನ ನಡುವೆ ಪರಮಾಣು ಯುದ್ಧ ಸಾಧ್ಯತೆ ಕಡಿಮೆ ಇದೆ. ಆದರೆ ಪರಮಾಣು ಯುದ್ಧವೇ ಆದಲ್ಲಿ ಅದು "ಶಾಶ್ವತ" ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಲಲು ನೆರೆ ರಾಷ್ಟ್ರಗಲಾದ ಬಾರತ ಹಾಗೂ ಪಾಕಿಸ್ತಾನ ನಡುವೆ ಪರಮಾಣು ಯುದ್ಧ ಸಾಧ್ಯತೆ ಕಡಿಮೆ ಇದೆ. ಆದರೆ ಪರಮಾಣು ಯುದ್ಧವೇ ಆದಲ್ಲಿ   ಅದು "ಶಾಶ್ವತ" ಪರಿಹಾರವಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ/
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ವಾತಾವರಣ ಈಗ ಸ್ವಲ್ಪ ತಿಳಿಯಾಗಿದೆ  ಆದರೆ ತಮ್ಮ "ಪರಮಾಣು ಅಸ್ತ್ರಗಳಿಂದ" ಯಾವಾಗಲಾದರೂ ಊಹಿಸಲಸಾಧ್ಯವಾದ ಪರಿಣಾಮವಾಗುವುದು ಸಾಧ್ಯ ಎಂದು ಪತ್ರಿಕೆಯ ಗುರುವಾರದ ಆವೃತ್ತಿಯಲ್ಲಿ ಹೇಳಲಾಗಿದೆ. 
ಅಲ್ಲದೆ "ಇದು ಸರಿಯಾದ ಪರಿಹಾರವಾಗುವುದಿಲ್ಲ" ಎಂದಿರುವ ಪತ್ರಿಕೆ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಉದ್ವಿಗ್ನತೆಯನ್ನು  ಕಡಿಮೆಗೊಳಿಸುವುದಕ್ಕೆ ನ್ಯೂಯಾರ್ಕ್ ಮಧ್ಯಪ್ರವೇಶಿಸಬೇಕ್ಗುತ್ತದೆ ಎಂದೂ ಹೇಳಿದೆ. "ಕಾಶ್ಮೀರದ ಭವಿಷ್ಯ - ಭಾರತ ಮತ್ತು ಪಾಕಿಸ್ತಾನ ತಮ್ಮನಡುವಿನ ವಿವಾದವನ್ನು ಬಗೆಹರಿಸಿಕೊಳ್ಳುವವರೆಗೂ ಅನಿರೀಕ್ಷಿತವಾಗಿರಲಿದೆ. ಮುಂದೆ ಇದರಿಂದ ಭಯಾನಕ ಪರಿಣಾಮಗಳಾಗುವುದನ್ನು ಅಲ್ಲಗೆಳೆಯುವಂತಿಲ್ಲ.
ಎರಡೂ ರಾಷ್ಟ್ರಗಳ ನಡುವಿನ ಮುಂದಿನ ಮುಖಾಮುಖಿ ಯೋಜಿಸಿದಷ್ಟು ಶಾಂತವಾಗಿರಲಾರದು ಎಂದು ಪತ್ರಿಕೆ ಹೇಳಿದೆ.
ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನಲವತ್ತಕ್ಕೆ ಹೆಚು ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ ಬಳಿಕ ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದೆ. ಅಲ್ಲದೆ ಫೆಬ್ರವರಿ ೨೬ಕ್ಕೆ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಲ್ ಕೋಟ್, ಮುಜಾಫರಾಬಾದ್ ಮೊದಲಾದೆಡೆ ನಡೆಸಿದ ವಿಮಾನಿಕ ದಾಳಿಯಲ್ಲಿ ಜೆಇಎಂ ಗೆ ಸೇರಿದ್ದ ಬಹುದೊಡ್ಡ ಉಗ್ರ ತರಬೇತಿ ಕೇಂದ್ರ ದ್ವಂಸವಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಒತ್ತಡಗಳು ಹೆಚ್ಚಿ ಇದೀಗ ಭಯೋತ್ಪಾದನೆಗೆ, ಉಗ್ರರಿಗೆ ಸಹಾಯ ನೀಡುವುದನ್ನು ತಡೆಯಲು ಮುಂದಾಗಿದೆ. ಅಲ್ಲದೆ ಹಲವು ಉಗ್ರ ಸಂಘಟನೆ ನಾಯಕರನ್ನು, ಮದ್ರಸಾಗಳನ್ನು ವಶಕ್ಕೆ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com