ನಾನು ತಿನ್ನಲು ಮಾತ್ರವಲ್ಲ, ಪಟ್ಟಣವನ್ನು ಆಳಬಲ್ಲೆ: ನಾನೇ 'ಮೇಯರ್' ಮೇಕೆ!

ಆಧುನಿಕ ಜಗತ್ತಿನಲ್ಲಿ ಪ್ರಾಣಿಗಳಿಗೆ ಕಿಂಚಿತ್ತೂ ಬೆಲೆಯಿಲ್ಲ ಎಂದು ಭಾವಿಸಿದ್ದರೇ ಖಂಡಿತ ತಪ್ಪು, ಮಾಂಸದ ಮೂಲಕ ಹೊಟ್ಟೆ ಸೇರುವ ಮೇಕೆಯೊಂದು ಮೇಯರ್ ..
ಮೇಯರ್ ಮೇಕೆ
ಮೇಯರ್ ಮೇಕೆ
ವಾಷಿಂಗ್ಟನ್: ಆಧುನಿಕ ಜಗತ್ತಿನಲ್ಲಿ ಪ್ರಾಣಿಗಳಿಗೆ ಕಿಂಚಿತ್ತೂ ಬೆಲೆಯಿಲ್ಲ ಎಂದು ಭಾವಿಸಿದ್ದರೇ ಖಂಡಿತ ತಪ್ಪು, ಮಾಂಸದ ಮೂಲಕ ಹೊಟ್ಟೆ ಸೇರುವ ಮೇಕೆಯೊಂದು ಮೇಯರ್ ಪಟ್ಟವೇರಿದೆ, ಆಶ್ಚರ್ಯವಾದರೂ ಇದು ಸತ್ಯ.
ಹೌದು ಅಮೆರಿಕಾದ ನಗರವೊಂದರಲ್ಲಿ ಪ್ರಾಣಿಗಳು ಚುನಾವಣೆಗೆ ಸ್ಪರ್ದಿಸಿವೆ, ಅಮೆರಿಕಾದ 2500 ಜನಸಂಖ್ಯೆಯ ಇರುವ ಫೇರ್ ಹವೆನ್ ನಲ್ಲಿ ವರ್ಮಂಟ್ ಎಂಬ ಚಿಕ್ಕ ನಗರದಲ್ಲಿ ಮೇಯರ್ ಚುನಾವಣೆ ನಡೆದಿತ್ತು.ಈ ಮೇಯರ್ ಚುನಾವಣೆಯಲ್ಲಿ ಮನುಷ್ಯರ ಬದಲಾಗಿ ನಾಯಿ, ಬೆಕ್ಕು ಮತ್ತು ಮೇಕೆಗಳು ಸ್ಪರ್ಧಿಸಿದ್ದವು. 
ಈ ವಾರ ನಡೆದ ಮೇಯರ್ ಚುನಾವಣೆಯಲ್ಲಿ ನಾಯಿ ಬೆಕ್ಕು, ಮೇಕೆ, ಸೇರಿದಂತೆ ಒಟ್ಟು 16 ಪ್ರಾಣಿಗಳು ಸ್ಪರ್ಧಿಸಿದ್ದವು, ಈ ಸಮರದಲ್ಲಿ ಲಿಂಕೋಲ್ನ್ ಹೆಸರಿನ 3ವರ್ಷದ ಮೇಕೆ ಮೇಯರ್ ಸ್ಥಾನ ಅಲಂಕರಿಸಿದೆ.
ಮೇಯರ್ ಚುನಾವಣೆಯಲ್ಲಿ ಆಯ್ಕೆ ಆಗುವ ಮೂಲಕ ಗೌರವಾನ್ವಿತ ಪ್ರಾಣಿ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಿಂಕೋಲ್ನ್  ಬರೋಬ್ಬರಿ 13 ಮತಗಳನ್ನು ಪಡೆದು ಗೆದ್ದಿದೆ, ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ.
ಸ್ಪರ್ಧಿಸಿದ್ದ 16 ಪ್ರಾಣಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಕ್ಕು ಮತ್ತು ನಾಯಿಗಳೇ ಸ್ಪರ್ದಿಸಿದ್ದವು, ಅದರಲ್ಲಿ ಸಮ್ಮಿ ಎಂಬ ನಾಯಿ 10 ಮತ ಪಡೆದಿತ್ತು, ಉಳಿದ ಅಭ್ಯರ್ಥಿಗಳು ಒಟ್ಟು 30 ಮತಗಳನ್ನು ಪಡೆದಿವೆ. 
ಈ ಮೇಲೆ ಶಾಲೆಯ ಗಣಿತ ಶಿಕ್ಷಕರಿಗೆ ಸೇರಿದ್ದಾಗಿದೆ, ಫೇರ್ ಹೆವನ್ ನಗರದಲ್ಲಿ ಇದುವರೆಗೆ ಅಧಿಕೃತವಾದ ಮೇಯರ್ ಇರಲಿಲ್ಲ, ಒಮೆನಾ ಮಿಚಿಗನ್ ಎಂಬ ಗ್ರಾಮದಲ್ಲಿ ಬೆಕ್ಕು, ಉನ್ನತ ಅಧಿಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪೇಪರ್ ನಲ್ಲಿ ಓದಿದ್ದ, ನಗರದ ಮ್ಯಾನೇಜರ್ ಜೋಸೆಫ್ ಗುಂಟೂರ್ ಫೇರ್ ಹೆವನ್ ಪಟ್ಟಣದಲ್ಲೂ ಇದೇ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com