ಪಾಕ್ ಮಾನ ಹರಾಜು ಹಾಕುತ್ತಿರುವ ಗಾಯಕಿ: ಸೋಷಿಯಲ್ ಮೀಡಿಯಾದಲ್ಲಿ ಬೇಜವಾಬ್ದಾರಿ ಪೋಸ್ಟ್!

ಪ್ರಧಾನಿ ಮೋದಿ ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾಳೆ, ತನ್ನ ಮೈಮೇಲೆ ಸೂಸೈಡ್ ಜಾಕೆಟ್ ಬಾಂಬ್  ಹಾಕಿಕೊಂಡಿರುವ ಫೋಟೋ ಟ್ವಿಟ್ಟರ್ ಗೆ ಹಾಕಿದ್ದಾಳೆ. 
ರಬಿ ಪಿರ್ಜಾಡಾ
ರಬಿ ಪಿರ್ಜಾಡಾ
Updated on

ಲಾಹೋರ್: ಕೇಂದ್ರ ಸರ್ಕಾರ ಜಮ್ಮು -ಕಾಶ್ಮೀರದ ವಿಧಿಯನ್ನು ರದ್ದು ಮಾಡಿದ ಮೇಲೆ ಪಾಕಿಸ್ತಾನ ಸಿಂಗರ್ ರಬಿ ಪಿರ್ಜಾಡಾ ತನ್ನ ಸುತ್ತ ಮೊಸಳೆ, ಹೆಬ್ಬಾವು ಮತ್ತು ಹಾವುಗಳನ್ನು ಹಾಕಿ ಅದರ ಬಾಯಿಗೆ ಗಮ್ ಟೇಪ್ ಹಾಕಿ ಕಾಶ್ಮೀರ ವಿಚಾರವಾಗಿ ನೀವು ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ಧಳು. ಈಗ ಅದೇ ಗಾಯಕಿ ಪ್ರಧಾನಿ ಮೋದಿಗೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾಳೆ.

ಪ್ರಧಾನಿ ಮೋದಿ ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾಳೆ, ತನ್ನ ಮೈಮೇಲೆ ಸೂಸೈಡ್ ಜಾಕೆಟ್ ಬಾಂಬ್  ಹಾಕಿಕೊಂಡಿರುವ ಫೋಟೋ ಟ್ವಿಟ್ಟರ್ ಗೆ ಹಾಕಿದ್ದಾಳೆ. 

ನಾನು ಕಾಶ್ಮೀರದ ಮಗಳು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧು ಪಡಿಸಿರುವುದನ್ನು ವಾಪಸ್ ಪಡೆಯದಿದ್ದರೇ ಮೋದಿ ಅವರ ಮೇಲೆ ಸೂಸೈಡ್ ಬಾಂಬ್ ದಾಳಿ ನಡೆಸುವುದಾಗಿ ಧಮಕಿ ಹಾಕಿದ್ದಾಳೆ.

ಅವಳ ಈ ಪೋಸ್ಟ್ ಗೆ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ,. ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಬೇಜಾವಾಬ್ದಾರಿಯುತ ಪೋಸ್ಟ್ ಹಾಕುವ ಮೂಲಕ ಪಾಕಿಸ್ತಾನದ ಇಮೇಜ್ ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com