ಭಾರತ-ಪಾಕಿಸ್ತಾನ ಒಪ್ಪಿದರೆ ಮಧ್ಯ ಪ್ರವೇಶಕ್ಕೆ ಡೊನಾಲ್ಡ್ ಟ್ರಂಪ್ ಸಿದ್ಧ: ಅಮೆರಿಕಾ ಪುನರುಚ್ಚಾರ 

ಎರಡೂ ರಾಷ್ಟ್ರಗಳು ಒಪ್ಪಿದರೆ ಮಾತ್ರ ಕಾಶ್ಮೀರ ವಿವಾದದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಾತುಕತೆ ನಡೆಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ದರಿದ್ದಾರೆ ಎಂದು ಸರ್ಕಾರದ ಹಿರಿಯ ಆಡಳಿತಾಧಿಕಾರಿಯೊಬ್ಬರು ಪುನರುಚ್ಛರಿಸಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಎರಡೂ ರಾಷ್ಟ್ರಗಳು ಒಪ್ಪಿದರೆ ಮಾತ್ರ ಕಾಶ್ಮೀರ ವಿವಾದದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಾತುಕತೆ ನಡೆಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ದರಿದ್ದಾರೆ ಎಂದು ಸರ್ಕಾರದ ಹಿರಿಯ ಆಡಳಿತಾಧಿಕಾರಿಯೊಬ್ಬರು ಪುನರುಚ್ಛರಿಸಿದ್ದಾರೆ. 


ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸ್ಥಿರ ಮತ್ತು ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಭಾರತ ಮಾತುಕತೆಗೆ ಸಿದ್ದವಿದೆ, ಹೀಗಾಗಿ ಶಾಂತಿ ಮಾತುಕತೆಯ ವಿಚಾರ ಪಾಕಿಸ್ತಾನ ತೆಗೆದುಕೊಳ್ಳುವ ಕ್ರಮದ ಮೇಲೆ ನಿಂತಿದೆ ಎಂದು ಅಮೆರಿಕಾ ಹೇಳಿದೆ.


ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇರುವ ಆತಂಕ ಮತ್ತು ಉದ್ವಿಗ್ನತೆ ಬಗ್ಗೆ ಅಧ್ಯಕ್ಷ ಟ್ರಂಪ್ ಅವರಿಗೆ ಕಳವಳವಿದೆ. ಈ ಕುರಿತು ಕಳೆದ ತಿಂಗಳು ಉಭಯ ದೇಶಗಳ ಪ್ರಧಾನಿ ಜೊತೆ ಮಾತನಾಡುವಾಗ ನೇರವಾಗಿ ಹೇಳಿದ್ದಾರೆ ಎಂದು ಅಮೆರಿಕಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಮಧ್ಯೆ ಪ್ರವೇಶಿಸಲು ಸಿದ್ದರಿದ್ದಾರೆ, ಆದರೆ ಎರಡು ದೇಶಗಳು ಒಪ್ಪಿದರೆ ಮಾತ್ರ, ಹೊರಗಿನವರ ಮಧ್ಯಪ್ರವೇಶದ ಸಹಕಾರ ಕೋರುವುದು ಬೇಡ ಎನ್ನುವುದು ಭಾರತದ ಅಭಿಪ್ರಾಯವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕಾ ಸರ್ಕಾರದ ಅಧಿಕಾರಿ ಹೇಳಿದರು.


ಕರ್ತಾರ್ ಪುರ್ ಕಾರಿಡಾರ್ ನಿರ್ಮಾಣಕ್ಕೆ ನಿಲುವಳಿ ಒಪ್ಪಂದ ಎರಡೂ ದೇಶಗಳ ಮಧ್ಯೆ ವಿಶ್ವಾಸಾರ್ಹತೆ ಬೆಳೆಸುವ ಕ್ರಮವಾಗಿದ್ದು ಇದರಿಂದ ಜನರ ಮಧ್ಯೆ ಸಂಪರ್ಕ ಹೆಚ್ಚಾಗಲಿದೆ. ಇದು ಒಂದು ಸಣ್ಣ ಹೆಜ್ಜೆಯಾಗಿದ್ದರೂ, ರಚನಾತ್ಮಕ, ಸದ್ಭಾವನೆ ಮತ್ತು ಉತ್ತಮ ವಾತಾವರಣವನ್ನು ಸೃಷ್ಟಿಸಲು ನಮಗೆ ಈ ರೀತಿಯ ಕ್ರಮ ಇನ್ನಷ್ಟು ಅಗತ್ಯವಿದೆ ಎಂದು  ಹೇಳಿದರು. 


ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟೊಟ್ಟಿಗೆ ಸಾಧ್ಯವಿಲ್ಲ ಎಂಬ ಭಾರತದ ನಿಲುವಿನ ಬಗ್ಗೆ ಕೇಳಿದಾಗ, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಾತುಕತೆ ಸಾಧ್ಯವಿದೆ, ಅಮೆರಿಕಾ ಕೂಡ ಅದನ್ನೇ ಉತ್ತೇಜಿಸುತ್ತದೆ, ಎರಡು ಪರಮಾಣುಭರಿತ ರಾಷ್ಟ್ರಗಳು ಒಂದಾದರೆ ಒಳ್ಳೆಯದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com