125 ರಿಂದ 250 ಗ್ರಾಮ್ ಚಿಕ್ಕದಾದ ಆಟಂಬಾಂಬ್ ಹೊಂದಿದ್ದೇವೆ-  ಪಾಕ್ ಸಚಿವ ಶೇಕ್ ರಶೀದ್ 

ಸದಾ ವಿವಾದಾತ್ಮಾಕ ಹೇಳಿಕೆಯಿಂದಾಗಿ ಹೆಸರಾಗಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಮತ್ತೆ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ
ಶೇಕ್ ರಶೀದ್
ಶೇಕ್ ರಶೀದ್

ಇಸ್ಲಾಮಾಬಾದ್ : ಸದಾ ವಿವಾದಾತ್ಮಾಕ ಹೇಳಿಕೆಯಿಂದಾಗಿ ಹೆಸರಾಗಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಮತ್ತೆ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ. ತಮ್ಮ ಬಳಿ 125ರಿಂದ 250 ಗ್ರಾಮ್ ಅಟಂಬಾಂಬ್ ಗಳಿದ್ದು, ಅವುಗಳನ್ನು ಭಾರತದಲ್ಲಿ ಗುರಿ ಇಟ್ಟಿರುವ ಪ್ರದೇಶಗಳ ಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದಾನೆ.

ಪಾಕಿಸ್ತಾನ ತಂತ್ರಜ್ಞಾನದಲ್ಲಿ ಅಭಿವೃದ್ದಿ ಹೊಂದಿದ್ದೆ ಎಂಬುದನ್ನು ತೋರ್ಪಡಿಸಿಕೊಳ್ಳುವ ಸಲುವಾಗಿ ಶೇಕ್ ರಶೀದ್ ಅಹ್ಮದ್ ಈ ರೀತಿಯ ಹೇಳಿಕೆ ನೀಡಿದ್ದಾನೆ ಎಂದು ಆ ರಾಷ್ಟ್ರದ ಮಾಧ್ಯಮ  ಮೂಲಗಳಿಂದ ತಿಳಿದುಬಂದಿದೆ.

ಶೇಕ್ ರಶೀದ್ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲಾ, ಈ ಹಿಂದೆ ಅನೇಕ ಬಾರಿ ವಿವಾದಾತ್ಮಾಕ ಹೇಳಿಕೆ ನೀಡಿದ್ದಾನೆ.  ಇತ್ತೀಚಿಗೆ ನರೇಂದ್ರ ಮೋದಿ ವಿರುದ್ಧ ಮಾತನಾಡುವಾಗ ವಿದ್ಯುತ್ ಶಾಕ್ ತಗುಲಿ ಸುದ್ದಿಯಾಗಿದ್ದ. 

ಭಾರತ ಹಾಗೂ ಪಾಕಿಸ್ತಾನ ನಡುವಣ ಮುಂದಿನ ತಿಂಗಳು ಅಥವಾ ಅಕ್ಟೋಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯುದ್ದ ನಡೆಯಲಿದೆ ಎಂದು ಸಹ ಹೇಳಿಕೆ ನೀಡಿದ್ದ. ಈ ತಿಂಗಳಲ್ಲಿ ಹಬ್ಬಗಳು ನಡೆಯಲಿದ್ದು, ಡಿಸೆಂಬರ್ ಗೆ ಬದಲಾಯಿಸಲಾಗುತ್ತದೆಯೇ ಎಂದು ಭಾರತದ ನೆಟ್ಟಿಗರು ರಶೀದ್ ಗೆ ಟ್ವೀಟರ್ ನಲ್ಲಿ ಮಂಗಳಾರತಿ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com