ಶ್ರೀಲಂಕಾ ಸರಣಿ ಸ್ಫೋಟದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಗಕ್ಕಾರ ವಿಡಿಯೋ ವೈರಲ್, ಇಷ್ಟಕ್ಕೂ ಈ ವಿಡಿಯೋದಲ್ಲೇನಿದೆ?

ಇಸಿಸ್ ಉಗ್ರ ಸಂಘಟನೆಯ ಭೀಕರ ಬಾಂಬ್ ಸ್ಫೋಟದ ಬಳಿಕ ಇಡೀ ದ್ವೀಪರಾಷ್ಟ್ರ ಭೀತಿಯಲ್ಲಿದ್ದು, ಇದೇ ಹೊತ್ತಿನಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ಒಂದು ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಇಸಿಸ್ ಉಗ್ರ ಸಂಘಟನೆಯ ಭೀಕರ ಬಾಂಬ್ ಸ್ಫೋಟದ ಬಳಿಕ ಇಡೀ ದ್ವೀಪರಾಷ್ಟ್ರ ಭೀತಿಯಲ್ಲಿದ್ದು, ಇದೇ ಹೊತ್ತಿನಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ಒಂದು ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
ಕಳೆದ ಭಾನುವಾರ ಶ್ರೀಲಂಕನ್ನರಿಗೆ ಈಸ್ಟರ್​ ಸಂಭ್ರಮಾಚರಣೆ ಕರಾಳ ಆಚರಣೆಯಾಗಿ, ಘೋರ ದಿನವಾಗಿ ಮಾರ್ಪಟ್ಟಿದೆ. ನಿರ್ದಯಿ ಭಯೋತ್ಪಾದಕರು ಎಲ್ಲಿದ್ದರಲ್ಲಿ ಪುಟ್ಟ ರಾಷ್ಟ್ರದಲ್ಲಿ ಬಾಂಬ್​ ಸ್ಫೋಟಿಸಿ ನೂರಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆಗೆ ಇಡೀ ವಿಶ್ವವೇ ಶ್ರೀಲಂಕಾ ಕುರಿತು ಮರುಕ ಪಡುತ್ತಿದ್ದು, ಇದೇ ಹೊತ್ತಿನಲ್ಲಿ ಅಲ್ಲಿನ ಜನರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟ್​ ಆಟಗಾರ ಕುಮಾರ ಸಂಗಾಕ್ಕಾರ ​ ಅವರು ಈ ಹಿಂದೆ ಶಾಲಾ ಕ್ರೀಡಾಕೂಟದ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಾಳ ಘಟನೆಯಿಂದ ಬೆಚ್ಚಿಬಿದ್ದ ಶ್ರೀಲಂಕನ್ನರಿಗೆ ಈ ವಿಡಿಯೋ ಹೊಸ ಆತ್ಮವಿಶ್ವಾಸ, ಚೈತನ್ಯ, ಹೊಸ ಹುರುಪನ್ನು ನೀಡುತ್ತಿದೆ. ಮೂರು ನಿಮಿಷದ ಭಾಷಣದಲ್ಲಿ ಕುಮಾರ ಸಂಗಕ್ಕಾರ ಆಡಿದ ಪ್ರತಿಯೊಂದು ಮಾತುಗಳು ಒಗ್ಗಟ್ಟಿನ ಶಕ್ತಿ, ಸಹಬಾಳ್ವೆ, ಕೋಮು ಸೌಹಾರ್ದದ ಮಹತ್ವವನ್ನು ತಿಳಿಸಿಕೊಟ್ಟಿವೆ.
'ನಾವು ಬರಿ ತರಗತಿ, ಮೊಬೈಲ್​, ಲ್ಯಾಪ್ ಟಾಪ್​ನಲ್ಲಿ ಸಮಯ ಕಳೆಯಬಾರದು. ಎಲ್ಲರೊಂದಿಗೂ ಬೆರೆಯಬೇಕು. ಪ್ರತಿಯೊಬ್ಬರಿಂದ ಕಲಿಯಬೇಕು. ಶ್ರೀಲಂಕಾ ಹಲವು ಧರ್ಮಗಳ ಸಮ್ಮಿಲನವಾಗಿದೆ. ಹಿಂದೂ, ಮುಸ್ಲಿಂ, ಬುರೆಸ್ಟ್​, ಪ್ರೆಸ್ಟಿಯನ್​, ಸ್ಟಾಮಿಯಲ್,  ಎಲ್ಲವೂ ಇವೆ. ಇವುಗಳಿಂದ ನಾವು ಪ್ರತ್ಯೇಕಗೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ನಮಗೆ ಬೆಸೆದುಕೊಂಡಿವೆ. ಪ್ರತಿಯೊಬ್ಬರು, ಉತ್ಸಾಹ, ಕನಸು, ಮತ್ತು ಮಹತ್ವದ ಗುರಿಯೊಂದಿಗೆ ಮುನ್ನಡೆಯಬೇಕು, ಸಾಧಿಸಬೇಕು. ನಮ್ಮ ಹಸ್ತದಲ್ಲಿ ಐದು ಬೆರಳುಗಳಿವೆ. ಒಂದು ಬೆರಳಿನಲ್ಲಿ ಚಪ್ಪಾಳೆ ಹೊಡೆದಾಗ ಬರುವ ಸದ್ದಿಗೂ ಐದು ಬೆರಳು ಸೇರಿಸಿ ಹೊಡೆದಾಗ ಬರುವ ಸದ್ದಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗೆ ನಾವೆಲ್ಲವೂ ಜೊತೆಗೂಡಿ, ಒಟ್ಟಾಗಿ ಮುನ್ನಡೆಯಬೇಕು' ಎಂಬ ಸ್ಫೋರ್ತಿದಾಯಕ ಮಾತುಗಳನ್ನು ಅವರು ಹೇಳಿದ್ದರು.
ಇದೀಗ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದು, ಬಾಂಬ್ ಸ್ಫೋಟದಿಂದ ನಲುಗಿ ಹೋಗಿರುವ ಲಂಕನ್ನರಿಗೆ ಹೊಸ ಹುರುಪು ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com