ಮುಂದಿನ ತಿಂಗಳು 'ರಫೆಲ್ 'ಯುದ್ಧ ವಿಮಾನ ಭಾರತಕ್ಕೆ: ಮೋದಿ ಹೇಳಿಕೆಗೆ ಪಾಕ್ ಗಡಗಡ

ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಶಕ್ತಿಶಾಲಿ ಯುದ್ಧ ವಿಮಾನ ಎನಿಸಿರುವ ರಫೆಲ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಪ್ಯಾರಿಸ್:  ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪುಂಡಾಟ ಸದೆಬಡಿಯುವ ನಿಟ್ಟಿನಲ್ಲಿ ಸದ್ಯದಲ್ಲೇ ಮತ್ತೊಂದು ಅಸ್ತ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಶಕ್ತಿಶಾಲಿ ಯುದ್ಧ ವಿಮಾನ ಎನಿಸಿರುವ ರಫೆಲ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದಿನ ತಿಂಗಳು 36 ರಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುತ್ತಿರುವುದರಿಂದ ಅತೀವ ಸಂತಸಗೊಂಡಿರುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಜೊತೆಗಿನ ದ್ವೀಪಕ್ಷೀಯ ಮಾತುಕತೆ ವೇಳೆಯಲ್ಲಿ ನರೇಂದ್ರ ಮೋದಿ ತಿಳಿಸಿದ್ದಾರೆ.

 ಪೂರ್ವ ಮತ್ತು ಪಶ್ಚಿಮದಲ್ಲಿ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು 2016 ಸೆಪ್ಟೆಂಬರ್ ತಿಂಗಳಲ್ಲಿ ಫ್ರೆಂಚ್ ಸರ್ಕಾರ ಹಾಗೂ ಡಾಸಾಲ್ಟ್ ವಿಮಾನಯಾನ ಕಂಪನಿಯೊಂದಿಗೆ ಸುಮಾರು 7.8 ಶತಕೋಟಿಗೂ ಹೆಚ್ಚಿನ   ಮೊತ್ತದಲ್ಲಿ 36 ರಾಫೆಲ್ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ರಫೆಲ್ ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ. 

ರಫೆಲ್ ಯುದ್ದ ವಿಮಾನಗಳು ಸದ್ಯ ಭಾರತದ ಬಳಿ ಇರುವ ಮಿರಾಜ್ -2000 ಯುದ್ದ ವಿಮಾನಗಳಿಗಿಂತಲೂ ಬಲಶಾಲಿಯಾಗಿವೆ. ಆಗಾಗ್ಗೆ ಅಣುಬಾಂಬ್ ಬೆದರಿಕೆಯ ಮಾತುಗಳನ್ನಾಡುವ ಪಾಕಿಸ್ತಾನ  ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಯಿಂದ ಗಡಗಡ ನಡುಗುವಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com