ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ: ಚೀನಾ, ಪಾಕ್ ವಿರುದ್ಧ ಅಮೆರಿಕ, ಬ್ರಿಟನ್, ಕೆನಡಾ ಕಿಡಿ

ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ತರಾಟೆಗೆ ತೆಗೆದುಕೊಂಡಿವೆ.
ವಿಶ್ವಸಂಸ್ಥೆ
ವಿಶ್ವಸಂಸ್ಥೆ

ವಿಶ್ವಸಂಸ್ಥೆಯಲ್ಲಿ ಚೀನಾ-ಪಾಕ್ ವಿರುದ್ಧ ಸಾಮೂಹಿಕವಾಗಿ ಮುಗಿಬಿದ್ದ ವಿಶ್ವ ಸಮುದಾಯ

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ತರಾಟೆಗೆ ತೆಗೆದುಕೊಂಡಿವೆ.

ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತಂತೆ ಅಮೆರಿಕದ ರಾಯಭಾರಿ ಸ್ಯಾಮ್ ಬ್ರೌನ್ ಬ್ಯಾಕ್, ಪೊಲೆಂಡ್ ನ ಮಾನವ ಹಕ್ಕುಗಳ ಇಲಾಖೆಯ ಮುಖ್ಯಸ್ಥ ಎನ್ ವಾಲ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

'ಚೀನಾ ಸರ್ಕಾರ ಮೊದಲು ಮಾನವ ಹಕ್ಕುಗಳ ರಕ್ಷಣೆ ಮತ್ತು ಚೀನಾದಲ್ಲಿರುವ ಪ್ರತೀಯೊಬ್ಬ ನಾಗರಿಕನ ಮೂಲಭೂತ ಸ್ವಾತಂತ್ರ್ಯದ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಚೀನಾ ಸರ್ಕಾರ ವಿನಾಕಾರಣ ಅಲ್ಪ ಸಂಖ್ಯಾತರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದೆ. ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ಚೀನಾ ಸರ್ಕಾರದ ಧೋರಣೆ ನಿಜಕ್ಕೂ ಕಳವಳಕಾರಿ ಎಂದು ಹೇಳಿದರು.  ಅಂತೆಯೇ ಪಾಕಿಸ್ತಾನದ ಕುರಿತು ಮಾತನಾಡಿದ ಅವರು, ಪಾಕಿಸ್ತಾನದ ಅಲ್ಪ ಸಂಖ್ಯಾತರು ತಾರತಮ್ಯದ ಕಾನೂನುಗಳು ಮತ್ತು ಅಭ್ಯಾಸಗಳ ಮೂಲಕ ಕಾನೂನು ಕ್ರಮದಿಂದ ಬಳಲುತ್ತಿದ್ದಾರೆ ಎಂದು ಕಿಡಿಕಾರಿದರು.

ಪಾಕಿಸ್ತಾನದಲ್ಲಿ ಅಹಮದೀಯರು, ಕ್ರಿಶ್ಚಿಯನ್ನರು ತಾರತಮ್ಯ ಅನುಭವಿಸುತ್ತಿದ್ದಾರೆ. ಚೀನಾದಲ್ಲಿ ವ್ಯೂಗರ್ ಮುಸ್ಲಿಮರು ತೊಂದರೆಯಲ್ಲಿದ್ದಾರೆ ಎಂದು ಕಿಡಿಕಾರಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾಹಿತಿ ಪಡೆಯಲಿರುವ ಟ್ರಂಪ್
ಇನ್ನು ಕಾಶ್ಮೀರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ಯಾರಿಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿದ್ದಾರೆ. ಕಾಶ್ಮೀರದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಅಮೆರಿಕ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com