ಕಾಶ್ಮೀರ ಕುರಿತು ಪಾಕ್ ಅಧ್ಯಕ್ಷನ ಪ್ರಚೋದನಕಾರಿ ಟ್ವೀಟ್, ಟ್ವಿಟರ್ ನಿಂದ ನೋಟಿಸ್, ಉತ್ತರಿಸದಿದ್ದರೆ ಖಾತೆ ಸ್ಥಗಿತ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಕುರಿತು ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಅರೀಫ್ ಅಲ್ವಿಗೆ ಟ್ವೀಟರ್ ಸಂಸ್ಥೆ ನೋಟಿಸ್ ಜಾರಿ ಮಾಡಿದ್ದು, ಉತ್ತರಿಸದಿದ್ದರೆ ಖಾತೆಯನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಪಾಕ್ ಅಧ್ಯಕ್ಷ  ಅರೀಫ್ ಅಲ್ವಿ
ಪಾಕ್ ಅಧ್ಯಕ್ಷ ಅರೀಫ್ ಅಲ್ವಿ

ವಾಷಿಂಗ್ಟನ್: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಕುರಿತು ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಅರೀಫ್ ಅಲ್ವಿಗೆ ಟ್ವೀಟರ್ ಸಂಸ್ಥೆ ನೋಟಿಸ್ ಜಾರಿ ಮಾಡಿದ್ದು, ಉತ್ತರಿಸದಿದ್ದರೆ ಖಾತೆಯನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370ಅನ್ನು ರದ್ದು ಮಾಡಿ ಜನ್ನು ಮತ್ತು ಕಾಶ್ಮೀರ, ಲಡಾಖ್ ನನ್ನು ಪ್ರತ್ಯೇಕ ರಾಜ್ಯಗಳಾಗಿಸಿದ್ದು ಮಾತ್ರವಲ್ಲದೇ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿತ್ತು. ಭಾರತ ಸರ್ಕಾರದ ಈ ನಿರ್ಧಾವನ್ನು ಖಂಡಿಸಿದ್ದ ಪಾಕಿಸ್ತಾನದ ಅಧ್ಯಕ್ಷ ಅರೀಫ್ ಅಲ್ವಿ ಈ ಕುರಿತಂತೆ ಪ್ರಚೋದನಕಾರಿ ಮತ್ತು ಸುಳ್ಳು ಅಂಶಗಳಿರುವ ಟ್ವೀಟ್ ಮಾಡಿದ್ದರು.

'ಆಗಸ್ಟ್ 24ರಂದು ಅಲ್ವಿ, 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮಿರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ' ಎಂಬ ಅರ್ಥದ ವೀಡಿಯೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಿದ್ದರು. 

ಇದೀಗ ಈ ಟ್ವೀಟ್ ಅವರ ಟ್ವಿಟರ್ ಖಾತೆಗೆ ಸಂಚಕಾರ ತಂದಿದ್ದು, ಇದೇ ಟ್ವೀಟ್ ಸಂಬಂಧ ಟ್ವಿಟರ್ ಸಂಸ್ಥೆ ಅಲ್ವಿಗೆ ನೋಟಿಸ್ ಜಾರಿ ಮಾಡಿದೆ. ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಆಲ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ಬಂದಿರುವುದಾಗಿ ಟ್ವೀಟರ್ ತಿಳಿಸಿದೆ. ಅಲ್ಲದೆ ಈ ಸಂಬಂಧ ಕೂಡಲೇ ಸ್ಪಷ್ಟನೆ ನೀಡುವಂತೆಯೂ ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com