ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟಿದ್ದ 18 ಭಾರತೀಯರ ಬಿಡುಗಡೆ!

ಆಫ್ರಿಕಾದ ಪಶ್ಚಿಮ ಕರಾವಳಿ ತೀರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ 18 ಮಂದಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಫ್ರಿಕಾದ ಪಶ್ಚಿಮ ಕರಾವಳಿ ತೀರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ 18 ಮಂದಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದೇ ಡಿಸೆಂಬರ್ 17ರಂದು ವಾಣಿಜ್ಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ 20 ಭಾರತೀಯರನ್ನು ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ಕಡಲ್ಗಳ್ಳರು ಅಪಹರಣ ಮಾಡಿದ್ದರು. ಹಾಂಕಾಂಗ್ ಮೂಲದ ವಾಣಿಜ್ಯ ಹಡಗಿನಲ್ಲಿ ಸರಕುಸಾಗಣೆ ಮಾಡುತ್ತಿದ್ದ ವೇಳೆ ಕಡಲ್ಗಳ್ಳರು ದಾಳಿ ಮಾಡಿ ನೌಕೆಯಲ್ಲಿದ್ದವರನ್ನು ಅಪಹರಣ ಮಾಡಿದ್ದರು. 

ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆ ನೈಜಿರಿಯಾದಲ್ಲಿನ ಭಾರತ ಮೂಲದ ಸಂಘಟನೆಗಳನ್ನು ಸಂಪರ್ಕಿಸಿ ಅವರ ಮೂಲಕ ಕಡಲ್ಗಳ್ಳರೊಂದಿಗೆ ಸಂಧಾನ ನಡೆಸಿದೆ. ಸಂಧಾನದ ಪರಿಣಾಮ ಇದೀಗ ಕಡಲ್ಗಳ್ಳರು 18 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಈ ಕಾರ್ಯಾಚರಣೆಗೆ ಆಫ್ರಿಕಾ ಸರ್ಕಾರ ಕೂಡ ನೆರವು ನೀಡಿದ್ದು, ಬಿಡುಗಡೆಯಾದ ಭಾರತೀಯರ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com