ಅವೈಜ್ಞಾನಿಕ ಗಣಿಗಾರಿಕೆ ಎಫೆಕ್ಟ್: ಬ್ರೆಜಿಲ್ ನ ಬೃಹತ್ ಅಣೆಕಟ್ಟು ಕುಸಿತ, 65 ಸಾವು, ನೂರಾರು ಮಂದಿ ನಾಪತ್ತೆ

ಅವೈಜ್ಞಾನಿಕ ಗಣಿಗಾರಿಕೆ ಪರಿಣಾಮ ಬ್ರೆಜಿಲ್ ನ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು, ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಬ್ರೆಜಿಲ್ ನಲ್ಲಿ ಡ್ಯಾಂ ಕುಸಿತ
ಬ್ರೆಜಿಲ್ ನಲ್ಲಿ ಡ್ಯಾಂ ಕುಸಿತ
ರಿಯೋ ಡಿ ಜನೈರೋ: ಅವೈಜ್ಞಾನಿಕ ಗಣಿಗಾರಿಕೆ ಪರಿಣಾಮ ಬ್ರೆಜಿಲ್ ನ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು, ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಜನವರಿ 25 ರಂದು ನಡೆದ ಅವಘಡದಲ್ಲಿ ಈ ವರೆಗೂ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು, ಸುಮಾರು 305 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಣೆಕಟ್ಟು ಕುಸಿದ ಪರಿಣಾಮ ಅಣೆಕಟ್ಟಿನಲ್ಲಿದ್ದ ಸುಮಾರು 11.7  ಮೀಟರ್ ಕ್ಯೂಬೆಕ್ ನೀರು ಸುತ್ತಮುತ್ತಲ ಗ್ರಾಮಗಳಿಗೆ ಹರಿದಿದಿದೆ. ಪರಿಣಾಮ ನೂರುರಾ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೆ ನೀರಿನೊಂದಿಗೆ ಅಣೆಕಟ್ಟೆಯಲ್ಲಿದ್ದ ಸುಮಾರು  ಮೀಟರ್ ಎತ್ತರದ ಹೂಳು ಕೂಡ ಹರಿದಿದ್ದು ನೂರಾರು ಮಂದಿ ಹೂಳಿನಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.
ಮಿನಾಸ್ ಗೆರೈಸ್ ನಲ್ಲಿರುವ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದೆ. ಕೂಡಲೇ ಅಧಿಕಾರಿಗಳು ಸುತ್ತಮುತ್ತಲ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದರಾದರೂ ಅಷ್ಟು ಹೊತ್ತಿಗಾಗಲೇ ಪ್ರವಾಹದ ನೀರು ಗ್ರಾಮಗಳ ಮೇಲೆ ದಾಳಿ ಮಾಡಿ ದೊಡ್ಡ ದುರಂತ ವೇರ್ಪಟ್ಟಿತ್ತು. ನೂರಾರು ಮಂದಿ ನಾಪತ್ತೆಯಾಗಿ ಹಲವರು ಸಾವನ್ನಪ್ಪಿದ್ದರು.
ಬ್ರೆಜಿಲ್ ಇತಿಹಾಸದಲ್ಲೇ ಇದು ಅತೀ ದೊಡ್ಡ ಡ್ಯಾಂ ದುರಂತವಾಗಿದ್ದು, ಈ ಹಿಂದೆಂದೂ ಇಂತಹ ದುರಂತ ಸಂಭವಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಡ್ಯಾಂ ದುರಂತಕ್ಕೆ ಅವೈಜ್ಞಾನಿಕ ಗಣಿಗಾರಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಡ್ಯಾಸುತ್ತಮುತ್ತ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಅಕ್ರಮ ಗಣಿಗಾರಿಕೆಯಿಂದಾಗಿಯೇ ಡ್ಯಾಂನ ಅಡಿಪಾಯದ ಮಣ್ಣು ಸಡಿಲಗೊಂಡಿದ್ದು, ಕಳೆದ ಶುಕ್ರವಾರ ಡ್ಯಾಂ ಕುಸಿದಿದೆ.
ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯ ಸಾವಿರಾರು ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com