ಭಾರತ ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಹಿಂಪಡೆಯುವವರೆಗೂ ನಮ್ಮ ವಾಯು ಪ್ರದೇಶ ತೆರೆಯುವುದಿಲ್ಲ: ಪಾಕ್

ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.

Published: 12th July 2019 12:00 PM  |   Last Updated: 12th July 2019 07:53 AM   |  A+A-


Pakistan won't open airspace until India withdraws fighter jets from forward airbases

ಭಾರತ ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಹಿಂಪಡೆಯುವವರೆಗೂ ನಮ್ಮ ವಾಯು ಪ್ರದೇಶ ತೆರೆಯುವುದಿಲ್ಲ: ಪಾಕ್

Posted By : SBV SBV
Source : The New Indian Express
ಇಸ್ಲಾಮಾಬಾದ್: ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. 

ಪಾಕಿಸ್ತಾನದ ವಾಯುಯಾನ ಕಾರ್ಯದರ್ಶಿ ಶಾರೂಖ್ ನುಸ್ರತ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಫೆ.26 ರಂದು ಭಾರತೀಯ ವಾಯುಪಡೆ ಬಾಲಾಕೋಟ್ ನಲ್ಲಿ ವಾಯುದಾಳಿಯ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಿನಿಂದಲೂ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

ಈಗ ಪಾಕಿಸ್ತಾನದ ವಾಯು ಪ್ರದೇಶವನ್ನು ಭಾರತಕ್ಕೆ ಮುಕ್ತ ಮಾಡುವ ಸಂಬಂಧ ಅಲ್ಲಿನ ವಾಯುಯಾನ ಇಲಾಖೆ ಅಧಿಕಾರಿ ಸ್ಪಷ್ಟನೆ ನೀಡಿದ್ದು, ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ನಿಮಗೆ ಮುಕ್ತ ಮಾಡುವುದಿಲ್ಲ ಎಂದು ಹೇಳಿದ್ದಾರೆ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp