ಜಿ-20 ಶೃಂಗಸಭೆಯಲ್ಲಿ ಹಾಂಗ್ ಕಾಂಗ್ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡಲ್ಲ- ಚೀನಾ

ಇದೇ 27ರಿಂದ 29ರವರೆಗೂ ನಡೆಯಲಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಬೃಹತ್ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಚೀನಾ ಇಂದು ಹೇಳಿದೆ.
ಪ್ರತಿಭಟನೆ
ಪ್ರತಿಭಟನೆ
ಬೀಜಿಂಗ್ : ಇದೇ 27ರಿಂದ 29ರವರೆಗೂ ನಡೆಯಲಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಬೃಹತ್ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಚೀನಾ ಇಂದು ಹೇಳಿದೆ.
ಜಪಾನ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತಿಸಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲಿರುವ ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಎದುರಿಸುವ ಜನರಿಗೆ ಮುಖ್ಯ ಭೂಮಿ ಹಸ್ತಾಂತರಿಸುವ ಭೂಮಿ ವಿರೋಧಿಸಿ ಹಾಂಗ್ ಕಾಂಗ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಹಿಂಸಾಚಾರದ ವೇಳೆಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. 
ಹಸ್ತಾಂತರ ಮಸೂದೆ ಹಾಗೂ ಪೊಲೀಸರು ಪ್ರತಿಕ್ರಿಯೆ ಕುರಿತಂತೆ ಮಾನವ ಹಕ್ಕು ರಕ್ಷಣಾ ಗುಂಪುಗಳಿಂದ ಅಂತಾರಾಷ್ಟ್ರೀಯ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಜಿ-20 ಶೃಂಗಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಚೀನಾದ ಸಹಾಯಕ ವಿದೇಶಾಂಗ ಸಚಿವ ಜಾಂಗ್ ಜೂನ್ ಹೇಳಿದ್ದಾರೆ. 
ಜಾಗತಿಕ ಆರ್ಥಿಕ ವಿಚಾರಗಳನ್ನು ಕುರಿತು ಚರ್ಚಿಸಲು ಜಿ-20 ವೇದಿಕೆಯಾಗಿದ್ದು, ಅದು ಜಾಗತಿಕ ವ್ಯಾಪಾರ, ಹಣಕಾಸು ಮತ್ತು ಆರ್ಥಿಕ ಸಮಸ್ಯೆಗಳ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com