ಆತ್ಮಹತ್ಯೆಗೆ ಮುನ್ನ ಫೇಸ್ ಬುಕ್ ಲೈವ್ ನಲ್ಲಿ ಬಾಲಾಕೋಟ್ ರೋಚಕ ಮಾಹಿತಿ ಬಿಚ್ಚಿಟ್ಟ ಮಾಜಿ ಜೈಷ್ ಉಗ್ರ!

ಉಗ್ರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನೀಚ ಬುದ್ದಿ ಮತ್ತೆ ಜಗತ್ತಿನ ಮುಂದೆ ಬಟಾ ಬಯಲಾಗಿದ್ದು, ಈ ಬಾರಿ ಸ್ವತಃ ಪಾಕಿಸ್ತಾನದ ಪ್ರಜೆ ಹಾಗೂ ಮಾಜಿ ಜೈಷ್ ಉಗ್ರ ಫೇಸ್ ಬುಕ್ ಲೈವ್ ಮೂಲಕ ಪಾಕಿಸ್ತಾನಗ ನಿಜ ಮುಖವಾಡದ ದರ್ಶನ ಮಾಡಿಸಿದ್ದಾನೆ.
ಜೈಷ್ ಉಗ್ರ ರಾಣಾ ಜಾವೇದ್ ವಿಡಿಯೋ
ಜೈಷ್ ಉಗ್ರ ರಾಣಾ ಜಾವೇದ್ ವಿಡಿಯೋ
ಇಸ್ಲಾಮಾಬಾದ್​: ಉಗ್ರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನೀಚ ಬುದ್ದಿ ಮತ್ತೆ ಜಗತ್ತಿನ ಮುಂದೆ ಬಟಾ ಬಯಲಾಗಿದ್ದು, ಈ ಬಾರಿ ಸ್ವತಃ ಪಾಕಿಸ್ತಾನದ ಪ್ರಜೆ ಹಾಗೂ ಮಾಜಿ ಜೈಷ್ ಉಗ್ರ ಫೇಸ್ ಬುಕ್ ಲೈವ್ ಮೂಲಕ ಪಾಕಿಸ್ತಾನಗ ನಿಜ ಮುಖವಾಡದ ದರ್ಶನ ಮಾಡಿಸಿದ್ದಾನೆ.
ದಶಕಗಳಿಂದಲೂ ಉಗ್ರರನ್ನು ಪೋಷಣೆ ಮಾಡುತ್ತಾ ಬಂದಿರುವ ಪಾಕಿಸ್ತಾನ ಜಾಗತಿಕ ಸಮುದಾಯಕ್ಕೆ ಮಾತ್ರ ತಾನು ಉಗ್ರ ವಿರೋಧಿ ಎಂದು ಹೇಳಿಕೊಳ್ಳುತ್ತಿತ್ತು. ಉಗ್ರರೊಂದಿಗೆ ನಾವು ಕೈ ಜೋಡಿಸಿಲ್ಲ, ಉಗ್ರರ ದಮನಕ್ಕೆ ನಾವು ಕ್ರಮಕೈಗೊಳುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿತ್ತು. ಆದರೆ ಇದೀಗ ಸ್ವತಃ ಪಾಕಿಸ್ತಾನ ಕೃಪಾ ಪೋಷಿತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮಾಜಿ ಉಗ್ರನೋರ್ವ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ಮುಖವಾಡವನ್ನು ಫೇಸ್ ಬುಕ್ ಲೈವ್ ನಲ್ಲಿ ಕಳಚಿದ್ದಾನೆ. 
ರಾಣಾ ಜಾವೇದ್​ ಎಂಬ ಪಾಕ್​ ಪ್ರಜೆ ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದಾನೆ. ವಿಡಿಯೋದಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ಹರಡಲು ಪಾಕಿಸ್ತಾನ ಉಗ್ರರಿಗೆ ನೆರವಾಗಿ ನಿಂತಿದ್ದು, ಆರ್ಥಿಕವಾಗಿ ಮತ್ತು ನೈತಿಕವಾಗಿ ಬೆಂಬಲ ನೀಡುತ್ತಿದೆ. ಉಗ್ರರಿಗಾಗಿಯೇ ನಿಧಿಯನ್ನು ಸಂಗ್ರಹಿಸಿ ಉಗ್ರ ಕೃತ್ಯಕ್ಕೆ ವಿನಿಯೋಗ ಮಾಡುತ್ತಿರುವ ಬಗ್ಗೆ ಆತ ಮಾಹಿತಿ ನೀಡಿದ್ದಾನೆ ತಿಳಿಸಿದ್ದಾನೆ. 
ರಾಣಾ ಪಾಕ್​ನ ಮಾಜಿ ಯೋಧ ಹಾಗೂ ಜೈಷ್​ ಇ ಮೊಹಮ್ಮದ್​ ಸಂಘಟನೆಯ ಮಾಜಿ ಉಗ್ರ. ತಾನು ಅಪ್​ಲೋಡ್​ ಮಾಡಿರುವ 42 ಸೆಂಕೆಡಿನ ವಿಡಿಯೋ ಸಂದೇಶದಲ್ಲಿ ಪಾಕಿಸ್ತಾನಿ ಸೇನೆ ಯುವಕರನ್ನು ಜಿಹಾದ್​ ಕಡೆ ಪ್ರಚೋದಿಸುತ್ತದೆ ಎಂಬ ಕರಾಳತೆಯನ್ನು ಬಿಚ್ಚಿಟ್ಟಿದ್ದಾನೆ. ವಿಡಿಯೋದಲ್ಲಿ ಪಾಕಿಸ್ತಾನದ ಬಾಲಾಕೋಟ್ ​ನಲ್ಲಿನ ಜೈಷ್​ ಇ ಮೊಹಮ್ಮದ್​ ಉಗ್ರ ಸಂಘಟನೆಯ ವಿರುದ್ಧ ಭಾರತ ನಡೆಸಿದ ವೈಮಾನಿಕ ದಾಳಿಯ ಕುರಿತು ಮಾತನಾಡಿರುವ ರಾಣಾ, ಬಾಲಾಕೋಟ್ ನಲ್ಲಿ ಉಗ್ರರ ಕ್ಯಾಂಪ್​ ಇಲ್ಲ ಎಂಬ ಪಾಕ್​ ವಾದವನ್ನೇ ತಳ್ಳಿಹಾಕಿದ್ದಾನೆ. ಬಾಲಾಕೋಟ್ ನಲ್ಲಿ ಜೆಇಎಂ ಉಗ್ರ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಭಾರತದೊಳಗೆ ಉಗ್ರರನ್ನು ಕಳುಹಿಸಲು ಅಲ್ಲಿ ತಯಾರಿ ನಡೆಯುತ್ತಿರುತ್ತದೆ. ಅಲ್ಲದೇ ವಿಶ್ವದೆಲ್ಲಡೆ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗುತ್ತದೆ ಎಂದು ಬಹಿರಂಗಪಡಿಸಿದ್ದಾನೆ.
ಉಗ್ರ ಸಂಘಟನೆಯಲ್ಲಿದ್ದು ಪಡಬಾರದ ಹಿಂಸೆ ಪಟ್ಟಿದ್ದೆ. ಬಳಿಕ ನನ್ನ ತಂದೆಯ ಮನವಿಯ ಮೇರೆಗೆ ನಾನು ಭಯೋತ್ಪಾದನೆಯನ್ನು ಬಿಟ್ಟು ಮುಖ್ಯವಾಹಿನಿಗೆ ಮರಳಿದೆ. ಇಸ್ಲಾಂ ಹೆಸರಿನಲ್ಲಿ ಈ ದೇಶದ ಸೇನೆ ಪಾಕ್​ ನಲ್ಲಿ ವಿಷಬೀಜವನ್ನು ಬಿತ್ತುತ್ತಿದೆ. ಆದರೆ, ಪಾಕ್ ನಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯಗಳ ಮುಂದೆ ಮನವಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ತಮ್ಮ ದೇಶದ ವ್ಯವಸ್ಥೆಯನ್ನೇ ಜರಿದಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com