ಮಸೂದ್ ಅಜರ್ 'ಜಾಗತಿಕ ಉಗ್ರ'; ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೂ ಮುನ್ನವೇ ಪಾಕ್, ಚೀನಾಗೆ ಅಮೆರಿಕ ಶಾಕ್

ಪುಲ್ವಾಮ ಉಗ್ರ ದಾಳಿ ರೂವಾರಿ ಮತ್ತು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಮೂಲಕ ಅಮೆರಿಕ ಪಾಕಿಸ್ತಾನ ಮತ್ತು ಚೀನಾಗೆ ಶಾಕ್ ನೀಡಿದೆ.

Published: 13th March 2019 12:00 PM  |   Last Updated: 13th March 2019 11:26 AM   |  A+A-


Masood Azhar A Global Terrorist, Says US Ahead Of Security Council Meet

ಸಂಗ್ರಹ ಚಿತ್ರ

Posted By : SVN SVN
Source : PTI
ವಾಷಿಂಗ್ಟನ್‌: ಪುಲ್ವಾಮ ಉಗ್ರ ದಾಳಿ ರೂವಾರಿ ಮತ್ತು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಮೂಲಕ ಅಮೆರಿಕ ಪಾಕಿಸ್ತಾನ ಮತ್ತು ಚೀನಾಗೆ ಶಾಕ್ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಗೆ ದಿನಗಣನೆ ಆರಂಭವಾಗಿರುವಂತೆಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅಮೆರಿಕ, 'ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿಗೆ ಅರ್ಹವಾಗಿದ್ದು, ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿಗೆ ಅಪಾಯಕಾರಿಯಾಗಿದ್ದಾನೆ ಎಂದು ಅಮೆರಿಕ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ ಎಂದು ಹೇಳಿದೆ. 

'ಅಜರ್‌ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ. ವಿಶ್ವಸಂಸ್ಥೆಯ ನಿಯಮಾನುಸಾರ ಜಾಗತಿಕ ಭಯೋತ್ಪಾದಕನೆಂಬ ಹಣೆಪಟ್ಟಿಗೆ ಈತ ಎಲ್ಲ ದೃಷ್ಟಿಯಿಂದಲೂ ಅರ್ಹನಾಗಿದ್ದಾನೆ' ಎಂದು ಅಮೆರಿಕ ವಿದೇಶಾಂಗ ಇಲಾಖೆ ಉಪ ವಕ್ತಾರ ರಾಬರ್ಟ್‌ ಪಲ್ಲಾಡಿನೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪುಲ್ವಾಮಾ ದಾಳಿ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರು ಖಾಯಂ ಸದಸ್ಯರಾದ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂಬ ಪ್ರಸ್ತಾಪವನ್ನು ಮತ್ತೊಮ್ಮೆ ಮುಂದಿಟ್ಟಿವೆ. ಈ ಮೂರು ದೇಶಗಳು ಈ ಹಿಂದೆಯೂ ಸಾಕಷ್ಟು ಪ್ರಯತ್ನಪಟ್ಟಿದ್ದವು. ಆದರೆ ಚೀನಾದ ತಡೆಯಿಂದಾಗಿ ಅಜರ್‌ಗೆ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಘೋಷಣೆ ಸಾಧ್ಯವಾಗಿಲ್ಲ. ಭದ್ರತಾ ಮಂಡಳಿಯ ಐದು ವೀಟೋ ರಾಷ್ಟ್ರಗಳ ಪೈಕಿ ಚೀನಾವೂ ಒಂದು. ಪ್ರತಿಬಾರಿ ಅಜರ್‌ ವಿರುದ್ಧ ಪ್ರಸ್ತಾವ ಮಂಡನೆಯಾದಾಗೆಲ್ಲ ಚೀನಾ ವೀಟೋ ಚಲಾಯಿಸಿ ನಿರ್ಣಯವನ್ನು ಹಾಳುಗೆಡವುತ್ತಿದೆ. 

ಭದ್ರತಾ ಮಂಡಳಿ ಸಭೆ ಇಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದ ಟ್ರಂಪ್‌ ಆಡಳಿತ ಮಂಗಳವಾರವೇ, ಅಜರ್ ವಿರುದ್ಧದ ನಿರ್ಣಯಕ್ಕೆ ಸಾಕಷ್ಟು ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp