ಅಝಾರ್ ಗೆ ಜಾಗತಿಕ ಉಗ್ರ ಪಟ್ಟ,ಅಮೆರಿಕಾ- ಪಾಕಿಸ್ತಾನ ಸಂಬಂಧದ ಮೇಲೆ ಪರಿಣಾಮ ಬೀರದು- ಪಾಕ್ ರಾಯಬಾರಿ

ಮಸೂದ್ ಅಝಾರ್ ನನ್ನು ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಿರುವುದರಿಂದ ಅಮೆರಿಕಾ ಹಾಗೂ ಪಾಕಿಸ್ತಾನದ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕಾದಲ್ಲಿನ ಪಾಕಿಸ್ತಾನ ರಾಯಬಾರಿ ಅಸಾದ್ ಮಜೀದ್ ಖಾನ್ ಹೇಳಿದ್ದಾರೆ.
ಮಸೂದ್ ಅಝಾರ್
ಮಸೂದ್ ಅಝಾರ್

ಟೆಕ್ಸಾಸ್ : ಜೈಷ್ - ಇ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝಾರ್ ನನ್ನು ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಿರುವುದರಿಂದ ಅಮೆರಿಕಾ ಹಾಗೂ ಪಾಕಿಸ್ತಾನದ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು  ಅಮೆರಿಕಾದಲ್ಲಿನ ಪಾಕಿಸ್ತಾನ ರಾಯಬಾರಿ ಅಸಾದ್ ಮಜೀದ್ ಖಾನ್ ಹೇಳಿದ್ದಾರೆ.

ಅಮೆರಿಕಾದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ.ಸದೃಢ ಪಾಲುದಾರಿಕೆಯ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದೇವೆ ಎಂದು ಮಜೀದ್ ದುನಿಯಾ ನ್ಯೂಸ್ ಗೆ ಹೇಳಿದ್ದಾರೆ.

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ  ಮಸೂದ್ ಅಝಾರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕೆಂಬ ಅಮೆರಿಕಾ, ಇಂಗ್ಲೆಂಡ್, ಮತ್ತು ಫ್ರಾನ್ಸ್  ದೇಶಗಳ  ಪ್ರಸ್ತಾವಕ್ಕೆ ಚೀನಾ ಆಕ್ಷೇಪಣೆಯನ್ನು ಹಿಂತೆಗೆದುಕೊಂಡ ನಂತರ ಬುಧವಾರ ಜಾಗತಿಕ ಉಗ್ರ ನೆಂದು ಘೋಷಿಸಲಾಗಿತ್ತು.ಇದು ಪಾಕಿಸ್ತಾನ ಹಾಗೂ ಅಮೆರಿಕಾ ನಡುವಣ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

ಮಸೂದ್ ಅಝಾರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕಾ, ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಪಾಕಿಸ್ತಾನ ಮುಂದಾಗಬೇಕೆಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com