ಪಾಕ್ ವಾಯುಪಡೆಗೆ ಚೀನಾ ಶಕ್ತಿ: ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರ

ಚೀನಾ ತನ್ನಲ್ಲಿ ತಯಾರಾದ ಮೊದಲ ಬಹುವಿಧ ಸಾಮರ್ಥ್ಯದ ಜೆಎಫ್-17 ಫೈಟರ್ ಜೆಟ್ ನ್ನು ಪಾಕಿಸ್ತಾನ ವಾಯುಪಡೆಗೆ ಹಸ್ತಾಂತರಿಸಿದೆ. ಚೀನಾ ಹಾಗೂ ಪಾಕಿಸ್ತಾನ ದಶಕಗಳ ಕಾಲದ ಒಪ್ಪಂದವೊಂದರ ಭಾಗವಾಗಿ ....

Published: 22nd May 2019 12:00 PM  |   Last Updated: 22nd May 2019 12:00 PM   |  A+A-


JF-17

ಜೆಎಫ್-17

Posted By : RHN RHN
Source : PTI
ಬೀಜಿಂಗ್: ಚೀನಾ ತನ್ನಲ್ಲಿ ತಯಾರಾದ ಮೊದಲ ಬಹುವಿಧ ಸಾಮರ್ಥ್ಯದ ಜೆಎಫ್-17 ಫೈಟರ್ ಜೆಟ್ ನ್ನು ಪಾಕಿಸ್ತಾನ ವಾಯುಪಡೆಗೆ ಹಸ್ತಾಂತರಿಸಿದೆ. ಚೀನಾ ಹಾಗೂ ಪಾಕಿಸ್ತಾನ ದಶಕಗಳ ಕಾಲದ ಒಪ್ಪಂದವೊಂದರ ಭಾಗವಾಗಿ ಚೀನಾ ಈ ಫೈಟರ್ ಜೆಟ್ ನ್ನು ಪಾಕ್ ಗೆ ಹಸ್ತಾಂತರಿಸಿದೆ. ಪಾಕಿಸ್ತಾನಕ್ಕಾಗಿ ವಿಮಾನ, ಯುದ್ಧ ವಿಮಾನಗಳ ಅಭಿವೃದ್ದಿಪಡ್ಸಲು ಚಿಣಾ ಹಾಗೂ ಪಾಕ್ ನಡುವೆ ಒಪ್ಪಂದವೇರ್ಪಟ್ಟಿತ್ತು.

ಒಂದು ದಶಕದ ಹಿಂದೆ ಚೀನಾ ಮತ್ತು ಪಾಕಿಸ್ತಾನ ಸಿಂಗಲ್ ಇಂಜಿನ್ ಹೊಂದಿರುವ ಲೈಟ್ ವೈಟ್ ಆಗಿರುವ ಜೆಎಫ್ -17 ಜೆಟ್ ಗಳ ಉತ್ಪಾದನೆ ಹಾಗೂ ಅಭಿವೃದ್ದಿಗೆ ಮುಂದಾಗಿದೆ.

ಈ ಹಿಂದೆ 2007ರಲ್ಲಿ ಚೀನಾ ಪಾಕಿಸ್ತಾನಕ್ಕೆ ತಮ್ಮ ಮೊದಲ ಬ್ಯಾಚ್ ನ ಉತ್ಪಾದಿನ ಜೆಟ್ ಗಳನ್ನು ಕಳಿಸಿತ್ತು. ಇದೀಗ ಒಂದು ದಶಕದ ತರುವಾಯ ಮೊದಲ ಜೆಎಫ್ -17ನ್ನು ಪಾಕ್ ಗೆ ಹಸ್ತಾಂತರ ಮಾಡಲಾಗಿದೆ.2016 ರಲ್ಲಿ ಎರಡೂ ರಾಷ್ಟ್ರಗಳು ಒಪಂದಕ್ಕೆ ಸಹಿ ಹಾಕಿದ ನಂತರ  ನವೆಂಬರ್ 2017 ರಲ್ಲಿ ಈ ಫೈಟರ್ ಜೆಟ್ ತಯಾರಿ ಹಾಗೂ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರವೆನ್ನುವುದು  ಒಂದು ಪ್ರಮುಖ ಮೈಲಿಗಲ್ಲು, ಎಂಬುದಾಗಿ ಚೀನಾದ ವಾಯು ರಕ್ಷಣಾ ಪರಿಣಿತನಾದ ಫೂ ಕ್ವಿಯಾನ್ಸ್ಹಾವೊ ಹೇಳಿದ್ದಾರೆ. ಈ ಯೋಜನೆಯಡಿಯಲ್ಲಿ ಇದೊಂದು ಮಹತ್ವದ ಘಟ್ಟವಾಗಿದೆ, ಫೈಟರ್ ಜೆಟ್ ನಲ್ಲಿನಪ್ರಾಯೋಗಿಕ ಕಾರ್ಯಾಚರಣೆ ಹಾಗೂ ಅದರಲ್ಲಿ ಕಂಡುಬರುವ ತಾಂತ್ರಿಕ ದೊಷಗಳನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದಲ್ಲಿ ಇತರ ಜೆಎಫ್-17 ನ ಕೂಲಂಕುಷ ಪರೀಕ್ಷೆಗಳ ಮಾನದಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಒಟ್ತಾರೆ ಚಿನಾ ಹಸ್ತಾಂತರಿಸಿರುವ ಈ ಫೈಟರ್ ಜೆಟ್ ನೊಡನೆ ಪಾಕ್ ವಾಯುಪಡೆ ಸಾಮರ್ಥ್ಯ ಹೊಸ ಎತ್ತರಕ್ಕೇರಿದಂತಾಗಿದೆ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp