ಹೂಡಿಕೆ ಮಾಡಲು, ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ: ವಿದೇಶಿ ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆ 

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ, ಭಾರತಕ್ಕೆ ಬಂದು ಉದ್ಯಮ ನಡೆಸಲು ಇದು ಸೂಕ್ತ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಥ್ಯೈಲ್ಯಾಂಡ್ ನಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಥ್ಯೈಲ್ಯಾಂಡ್ ನಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಬ್ಯಾಂಕಾಕ್: ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ, ಭಾರತಕ್ಕೆ ಬಂದು ಉದ್ಯಮ ನಡೆಸಲು ಇದು ಸೂಕ್ತ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಹೂಡಿಕೆ ಮತ್ತು ಸುಲಭ ಉದ್ಯಮಕ್ಕೆ ಭಾರತಕ್ಕೆ ಬನ್ನಿ. ಕ್ರಿಯಾತ್ಮಕವಾಗಿ ಉದ್ಯಮ ಆರಂಭಿಸಲು ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ಸ್ಥಳಗಳು ಮತ್ತು ಉತ್ತಮ ಆತಿಥ್ಯ ಭಾರತದಲ್ಲಿ ಸಿಗುತ್ತದೆ. ಭಾರತ ನಿಮಗೆ ಮುಕ್ತ ಬಾಹುಗಳಿಂದ ಅಪ್ಪಿಕೊಳ್ಳಲು ಕಾಯುತ್ತಿದೆ ಎಂದು ಹೇಳಿದರು. ಅವರು ಬ್ಯಾಂಕಾಕ್ ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ನ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಪ್ರಧಾನಿ ಮೋದಿಯವರ ಮಾತಿನ ಸಾರಾಂಶಗಳು ಹೀಗಿದೆ: 
-ಭಾರತವು ಹೂಡಿಕೆದಾರರನ್ನು ಮುಕ್ತ ಕೈಗಳಿಂದ ಸ್ವಾಗತಿಸುತ್ತದೆ. ನಮ್ಮ ಸರ್ಕಾರದ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್, ಸ್ಮಾರ್ಟ್ ಸಿಟಿ ಮುಂತಾದವು ಉತ್ತಮ ಪಾಲುದಾರಿಕೆ ಅವಕಾಶಗಳನ್ನು ನೀಡಿವೆ.


-ತೆರಿಗೆ ಕ್ಷೇತ್ರದಲ್ಲಿ ಭಾರತ ಸರ್ಕಾರ ಅಭೂತಪೂರ್ವ ಕೆಲಸ ಮಾಡಿದೆ. ಜನಸ್ನೇಹಿ ತೆರಿಗೆ ವಿಧಾನ ಹೊಂದಿರುವ ಉತ್ತಮ ದೇಶಗಳಲ್ಲಿ ಒಂದು ಭಾರತ.


-ಇಂದಿನ ಭಾರತದಲ್ಲಿ, ಕಠಿಣ ಪರಿಶ್ರಮದ ತೆರಿಗೆ ಪಾವತಿದಾರರ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ತೆರಿಗೆ ವಿಧಾನದಲ್ಲಿ ನಾವು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದೇವೆ.


-ಭಾರತದಲ್ಲಿ ಪರಿವರ್ತಕ ಬದಲಾವಣೆಗಳಾಗುತ್ತಿವೆ. ದೇಶದಲ್ಲಿ ವಾಡಿಕೆಯ ಅಧಿಕಾರಶಾಹಿ ರೀತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ.


-ಭಾರತವು ಈಗ ಹೂಡಿಕೆಯಲ್ಲಿ ವಿಶ್ವದ ಅತ್ಯಂತ ಆಕರ್ಷಕ ಆರ್ಥಿಕತೆಯ ದೇಶವಾಗಿದೆ.


-ನಾವು ಈಗ ಶ್ರೀಮಂತ-ಬಡವರೆನ್ನದೆ ಪ್ರಮುಖ ಗಣ್ಯ ವ್ಯಕ್ತಿಗಳೆಂದು ತಾರತಮ್ಯ ತೋರದೆ ಎಲ್ಲರಿಗೂ ಸಮಾನವಾಗಿ ತೆರಿಗೆ ಮೌಲ್ಯಮಾಪನವನ್ನು ಮಾಡುವುದರಿಂದ ಇಲ್ಲಿ ಕಿರುಕುಳ ಅಥವಾ ತಾರತಮ್ಯದ ಪ್ರಶ್ನೆಯೇ ಬರುವುದಿಲ್ಲ.


-ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಭಾರತ ಈಗ ಮತ್ತೊಂದು ಕನಸಿನ ಬೆನ್ನತ್ತಿ ಹೋಗಿದೆ. 2014 ರಲ್ಲಿ ನನ್ನ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಭಾರತದ ಜಿಡಿಪಿ ಸುಮಾರು 2 ಟ್ರಿಲಿಯನ್ ಡಾಲರ್ ಆಗಿತ್ತು. ಇದಕ್ಕೆ ಮೊದಲು 65 ವರ್ಷಗಳಲ್ಲಿ, 2 ಟ್ರಿಲಿಯನ್. ಆದರೆ ಕೇವಲ 5 ವರ್ಷಗಳಲ್ಲಿ, ನಾವು ಅದನ್ನು ಸುಮಾರು 3 ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಿದ್ದೇವೆ.


-ವಿಶ್ವ ಬ್ಯಾಂಕಿನ ಸುಲಭ ಉದ್ಯಮ-ವ್ಯವಹಾರದಲ್ಲಿ ಭಾರತ 79 ಸ್ಥಾನಗಳಷ್ಟು ಮೇಲಕ್ಕೇರಿದೆ. "ಕಷ್ಟಪಟ್ಟು ದುಡಿಯುವ ತೆರಿಗೆದಾರರ ಕೊಡುಗೆಯನ್ನು ಪಾಲಿಸಲಾಗುತ್ತದೆ ಮತ್ತು ತೆರಿಗೆ ವಿಧಿಸುವಲ್ಲಿ ಸರ್ಕಾರ ಮಹತ್ವದ ಕೆಲಸ ಮಾಡಿದೆ" ಎಂದು ಪ್ರಧಾನಿ ಮೋದಿ ಹೇಳಿದರು.


-ನೇರ ನಗದು ವರ್ಗಾವಣೆ ಸೌಲಭ್ಯ(ಡಿಬಿಟಿ) ವ್ಯವಸ್ಥೆಯ ಮೂಲಕ ಸರ್ಕಾರವು ಮಧ್ಯವರ್ತಿ ಸಂಸ್ಕೃತಿಯನ್ನು ಕೊನೆಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com