ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ್ಯೆ ಬೆನ್ನಲ್ಲೇ, ಆತನ ಸಹೋದರಿಯ ಬಂಧನ

ಇತ್ತೀಚೆಗಷ್ಟೇ ಸಿರಿಯಾದಲ್ಲಿ ಸಾವನ್ನಪ್ಪಿದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ಜಾದಿಯ ಸಹೋದರಿಯನ್ನು ಟರ್ಕಿ ಸೇನೆ ಬಂಧಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಇತ್ತೀಚೆಗಷ್ಟೇ ಸಿರಿಯಾದಲ್ಲಿ ಸಾವನ್ನಪ್ಪಿದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ಜಾದಿಯ ಸಹೋದರಿಯನ್ನು ಟರ್ಕಿ ಸೇನೆ ಬಂಧಿಸಿದೆ ಎಂದು ತಿಳಿದುಬಂದಿದೆ.

ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಅಬೂಬಕರ್ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್ (65 ವರ್ಷ) ಅವರನ್ನು ಟರ್ಕಿ ಸೇನೆ ಬಂಧಿಸಿದೆ. ಅಂತೆಯೇ ಬಂಧನದ ವೇಳೆ ಆಕೆಯೊಂದಿಗೆ ಐದು ಜನ ಮಕ್ಕಳಿದ್ದರು ಎನ್ನಲಾಗಿದೆ.

ಇನ್ನು ರಸ್ಮಿಯಾ ಆವಾದ್ ಬಂಧನದ ಮೂಲಕ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸೇನೆ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ ಎಂದು ಎನ್ನಲಾಗಿದೆ. ಇಸಿಸ್ ಉಗ್ರ ಸಂಘಟನೆಗೆ ಸೇರಿದ ಮಹತ್ವದ ಮಾಹಿತಿ ಆಕೆಗೆ ತಿಳಿದಿದೆ ಎನ್ನಲಾಗಿದೆ. ಅಲ್ಲದೆ ಆಕೆ ಕೂಡ ಉಗ್ರ ಸಂಘಟನೆಯೊಂದಿಗೆ ಸಕ್ರಿಯಳಾಗಿದ್ದಳು. ಹೀಗಾಗಿ ಆಕೆಗೆ ಇಸಿಸ್ ಸಂಘಟನೆಯ ಪ್ರಮುಖ ಮಾಹಿತಿ ತಿಳಿದಿರುತ್ತದೆ ಎಂದು ಸೇನೆ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com