ಹಫೀಜ್ ಸಯೀದ್‌ಗೆ 'ಪಾಕೆಟ್ ಮನಿ' ಕೋರಿರುವ ಪಾಕಿಸ್ತಾನ ದ್ವಿಮುಖ ನೀತಿ ತೋರಿದೆ: ವಿದೇಶಾಂಗ ಸಚಿವಾಲಯ  

ಭಯೋತ್ಪಾದನೆ ವಿಷಯದಲ್ಲಿ ನಿರಂತರ ದ್ವಿಮುಖ ನೀತಿ ತೋರುವ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಇಸ್ಲಾಮಾಬಾದ್ 'ಭಯೋತ್ಪಾದಕ ಹಫೀಜ್ ಸಯೀದ್ ಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ 'ಪಾಕೆಟ್ ಮನಿ' ಕೋರಿ ಅರ್ಜಿ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದೆ.
ಹಫೀಜ್ ಸಯೀದ್‌ಗೆ 'ಪಾಕೆಟ್ ಮನಿ' ಕೋರಿರುವ ಪಾಕಿಸ್ತಾನ ದ್ವಿಮುಖ ನೀತಿ ತೋರಿದೆ: ವಿದೇಶಾಂಗ ಸಚಿವಾಲಯ
ಹಫೀಜ್ ಸಯೀದ್‌ಗೆ 'ಪಾಕೆಟ್ ಮನಿ' ಕೋರಿರುವ ಪಾಕಿಸ್ತಾನ ದ್ವಿಮುಖ ನೀತಿ ತೋರಿದೆ: ವಿದೇಶಾಂಗ ಸಚಿವಾಲಯ

 ನವದೆಹಲಿ: ಭಯೋತ್ಪಾದನೆ ವಿಷಯದಲ್ಲಿ ನಿರಂತರ ದ್ವಿಮುಖ ನೀತಿ ತೋರುವ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಇಸ್ಲಾಮಾಬಾದ್ 'ಭಯೋತ್ಪಾದಕ ಹಫೀಜ್ ಸಯೀದ್ ಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ 'ಪಾಕೆಟ್ ಮನಿ' ಕೋರಿ ಅರ್ಜಿ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದೆ.

ಇದನ್ನು ನಕಲುತನ ಮತ್ತು ಡಬಲ್ ಸ್ಟ್ಯಾಂಡರ್ಡ್ ಎಂದು ಕರೆಯಲಾಗುತ್ತದೆ; ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಹಫೀಜ್ ಸಯೀದ್ ವಿಶ್ವಸಂಸ್ಥೆ ಪ್ರಕಟಿಸಿದ ಭಯೋತ್ಪಾದಕ ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಸೂತ್ರಧಾರನೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ, ವಾಸ್ತವವಾಗಿ ಅಮೆರಿಕ ಸರ್ಕಾರವು ಸಹ 10 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಅವನ ತಲೆಗೆ ಘೋಷಿಸಿದೆ ಎಂದು ಅವರು ಹೇಳಿದರು.

"ಈಗ, ಒಂದು ದೇಶವು ವಿಶ್ವಸಂಸ್ಥೆ ನಿರ್ಬಂಧ ಸಮಿತಿಯ ಮುಂದೆ ಜಾಗತಿಕ ಭಯೋತ್ಪಾದಕನ ಪರವಾಗಿ ಅವನಿಗೆ ಪಾಕೆಟ್ ಹಣವನ್ನು ಕೋರಿ ಅರ್ಜಿಯನ್ನು ನೀಡುತ್ತದೆ. ಅದೇ ದೇಶವೇ ನಾವು ಭಯೋತ್ಪಾದಕರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳುತ್ತದೆ ಎಂದು ಅವರ ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com