ಅಮೆರಿಕಾ ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ?

ಉತ್ತರ ಸಿರಿಯಾದಲ್ಲಿ ಅಮೆರಿಕಾ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹೊಡೆದುರುಳಿಸಿದ್ದಾರೆಂದು ಭಾನುವಾರ ವರದಿಯಾಗಿದೆ.

Published: 27th October 2019 11:10 AM  |   Last Updated: 27th October 2019 11:10 AM   |  A+A-


ISIS leader Abu Bakr al-Baghdadi

ಇಸಿಸ್ ಮುಖ್ಯಸ್ಥ ಬಾಗ್ದಾದಿ

Posted By : Manjula VN
Source : Online Desk

ವಾಷಿಂಗ್ಟನ್: ಉತ್ತರ ಸಿರಿಯಾದಲ್ಲಿ ಅಮೆರಿಕಾ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹೊಡೆದುರುಳಿಸಿದ್ದಾರೆಂದು ಭಾನುವಾರ ವರದಿಯಾಗಿದೆ. 

ಹತ್ಯೆಯಾಗಿರುವ ಬಾಗ್ದಾದಿ ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದು, 2014ರಿಂದ ಭೂಗತ ಆಗಿದ್ದ. ಕಳೆದ ಏಪ್ರಿಲ್ ತಿಂಗಳಿನಲ್ಲಿಯೂ ಇಸಿಸ್ ವಿಡಿಯೋವೊಂದನ್ನು ಹರಿಬಿಟ್ಟಿತ್ತು. ವಿಡಿಯೋದಲ್ಲಿ ಬಾಗ್ದಾದಿ ಕಾಣಿಸಿಕೊಂಡಿದ್ದ ಎಂದು ಹೇಳಲಾಗುತ್ತಿತ್ತು. 

2017ರ ಮೇ ತಿಂಗಳಿನಲ್ಲಿ ಅಮೆರಿಕಾ ನಡೆಸಿದ್ದ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ ಎಂದು ಅಮೆರಿಕಾ ಸೇನೆ ಹೇಳಿತ್ತು. ಈತ 2010ರಲ್ಲಿ ಇಸಿಸ್ ಮುಖ್ಯಸ್ಥನಾಗಿದ್ದ. ಪ್ರಸ್ತುತ ಅಮೆರಿಕಾ ನಡೆಸಿದ್ದ ದಾಳಿಯಲ್ಲಿ ಬಾಗ್ದಾದಿ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಅಮೆರಿಕಾ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp